ಮುದ್ದೇಬಿಹಾಳ: ಚಿಕ್ಕ ಮಕ್ಕಳಲ್ಲಿ ಅತಿಸಾರ ಭೇದಿ ಉಂಟಾದಲ್ಲಿ ಪಾಲಕರು ತಪ್ಪದೇ ಓ.ಆರ್.ಎಸ್ ದ್ರಾವಣ ಕುಡಿಸಬೇಕು. ಅತಿಯಾದ ಭೇದಿಯಿಂದ ಬಳಲುವ ಮಕ್ಕಳಿಗೆ ಜಿಂಕ್ ಮಾತ್ರೆ ನೀಡಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ ಹೇಳಿದರು.
ಪಟ್ಟಣದ ಹೊರಪೇಟೆ ಗಲ್ಲಿಯಲ್ಲಿರುವ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಒಂದು ಸಾಮಾಜಿಕ ಅರಿವಿನ ಆಂದೋಲನವನ್ನಾಗಿಸುವ ಪ್ರಯುಕ್ತ ನಡೆದ ತೀವ್ರ ಅತಿಸಾರ ನಿಯಂತ್ರಣ ಪಾಕ್ಷಿಕ ದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಓ.ಆರ್.ಎಸ್ ಜಿಂಕ್ ಮಾತ್ರೆಗಳ ಕಾರ್ನರ್ ತೆರೆಯಲಾಗಿದೆ. ನಿಮ್ಮ ಮಕ್ಕಳಲ್ಲಿ ಅತಿಯಾದ ಭೇದಿ ಕಂಡುಬಂದಲ್ಲಿ ಅವಶ್ಯಕವಾಗಿ ಭೇಟಿ ನೀಡಿ ಅತಿಸಾರ ಭೇದಿಯ ರೋಗ ಸ್ಪೋಟವನ್ನು ತಪ್ಪಿಸಿ, ಮನೆಯಲ್ಲಿ ಶುದ್ಧವಾಗಿ ತಯಾರಿಸಿದ ಅಹಾರವನ್ನು ತಿನ್ನಿರಿ, ಬೀದಿ ಬದಿಯ ಅಹಾರವನ್ನು ಸೇವಿಸದಂತೆ ಸಲಹೆ ನೀಡಿದರು.
ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಮಾತನಾಡಿದರು.
ಇದೇ ವೇಳೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಜಿಂಕ್ ಮಾತ್ರೆಗಳ ಲಭ್ಯತೆ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಐ.ಸಿ.ಮಾನಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಮನಹಳ್ಳಿ, ಆರೋಗ್ಯ ನಿರೀಕ್ಷಣಾಧಿಕಾರಿ ಏನ್.ಜಿ.ತಾಳಿಕೋಟಿ, ಎಸ್.ಎಸ್.ಸಜ್ಜನ್, ಇಸ್ಮಾಯಿಲ್ ವಾಲೀಕಾರ್, ಬಿಪಿಎಂಓ ಬಸವರಾಜ್, ಎಸ್.ಸಿ.ರುದ್ರವಾಡಿ, ಅಂಗನವಾಡಿ ಕಾರ್ಯಕರ್ತೆಯರಾದ ಶೈಲಜ ರಾಠೋಡ, ಶರೀಫ ಸಗರ್, ಲತಾ ಕುಲಕರ್ಣಿ ಸೇರಿದಂತೆ ಆಶಾ ಕಾರ್ಯಕರ್ತರು ಇದ್ದರು.
Related Posts
Add A Comment