ಮುದ್ದೇಬಿಹಾಳ: ಪಟ್ಟಣದಲ್ಲಿ ಕೆಲವರು ತಮ್ಮ ದ್ವಿಚಕ್ರ ವಾಹನಗಳಿಗೆ ಅತಿಯಾಗಿ ಶಬ್ಧಮಾಡುವ ಸೈಲೆನ್ಸರ್ ಗಳನ್ನು ಅಳವಡಿಸಿ ಜನನಿಬಿಡ ಪ್ರದೇಶಗಳಲ್ಲಿ ವೇಗವಾಗಿ ತಿರುಗಾಡುತ್ತ ಕಿರಿಕಿರಿಯನ್ನುಂಟು ಮಾಡುತ್ತಿದ್ದವರಿಗೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಶಾಕ್ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯೇ ಅತಿಯಾಗಿ ಶಬ್ಧಮಾಡುವ ಸೈಲೆನ್ಸ್ರ್ ಗಳನ್ನು ಕಳಚುವಂತೆ ಮಾಧ್ಯಮದ ಮೂಲಕ ಖಡಕ್ ಸೂಚನೆ ನೀಡಿದ್ದರೂ ಕ್ಯಾರೇ ಎನ್ನದ ದ್ವಿಚಕ್ರವಾಹನ ಸವಾರನೋರ್ವ ಯುವಕನನ್ನು ವಾಹನ ಸಮೇತ ಠಾಣೆಗೆ ತಂದು ಪಾಠ ಕಲಿಸಿ, ಶಬ್ಧಮಾಡುವ ಸೈಲೆನ್ಸ್ರ್ ನ್ನು ಕಳಚಿಸಿ, ದಂಡದ ಬಿಸಿ ಮುಟ್ಟಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೂ ಕೆಲ ಜೋರಾಗಿ ಶಬ್ಧಮಾಡುವ ವಾಹನಗಳು ಅಲ್ಲಲ್ಲಿ ಓಡಾಡುತ್ತಿದ್ದು ನಮ್ಮ ಸಿಬ್ಬಂದಿ ಅವರಿಗಾಗಿ ಶೋಧ ನಡೆಸಿದ್ದಾರೆ. ಆ ವಾಹನಗಳು ಸಿಕ್ಕಲ್ಲಿ ಯಾವ ಪ್ರಭಾವಕ್ಕೂ ಒಳಗಾಗದೇ ಠಾಣೆಗೆ ಕರೆತರುವಂತೆ ಸೂಚಿಸಿದ್ದೇನೆ. ಇನ್ಮುಂದೆ ಬರುವ ವಾಹನಗಳನ್ನು ನೇರವಾಗಿ ನ್ಯಾಯಾಲಯಕ್ಕೇ ಕಳಿಸುವುದಾಗಿ ತಿಳಿಸಿದರು.
Related Posts
Add A Comment