ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಆಲಮೇಲದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದ್ದು, ಈ ಪ್ರದೇಶ ನಿಜಕ್ಕೂ ಮತೀಯ ಸಾಮರಸ್ಯ, ಕೋಮು ಸೌಹಾರ್ದತೆಯ ಪ್ರತೀಕ ವಾಗಿದೆ ಎಂದು ನಿರ್ಗಮಿತ ಪಿಎಸ್ಐ ಅರವಿಂದ ಅಂಗಡಿ ಅಭಿಪ್ರಾಯ ಪಟ್ಟರು.
ಪಟ್ಟಣದ ಐ ಜೆ ರಾಯಲ್ ಫಂಕ್ಷನ್ ಹಾಲ್ ನಲ್ಲಿ ಜರುಗಿದ ವರ್ಗಾವಣೆಗೊಂಡ ಪಿಎಸ್ಐ ಮತ್ತು ಸಿಬ್ಬಂದಿಗಳ ಬಿಳ್ಕೊಡುವ ಮತ್ತು ನೂತನ ಪಿಎಸ್ಐ ರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸಮಾರಂಭದಲ್ಲಿ ಆಲಮೇಲ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕಗೌಡ ಎಂ ಕೋಳಾರಿ ಅವರು ನಿರ್ಗಮಿತ ಪಿಎಸ್ಐ ಅರವಿಂದ್ ಅಂಗಡಿ ಅವರಿಗೆ ‘ಆದರ್ಶ ಸೇವಾ ಪುರಸ್ಕಾರ’ ಪ್ರದಾನ ಮಾಡಿ ಶುಭಕೋರಿದರು. ವೈದ್ಯ ಸಾಹಿತಿ ಡಾ ಸಮೀರ್ ಹಾದಿಮನಿ ಮಾತನಾಡಿ, ದಕ್ಷ ಪೊಲೀಸ್ ಅಧಿಕಾರಿಗೆ ನಿಷ್ಠೆ, ನಿರ್ಭೀತತೆ ಮತ್ತು ನ್ಯಾಯಪರತೆಗಳೇ ಆಭರಣವಾಗಿದ್ದು, ಪಿಎಸ್ಐ ಅರವಿಂದ್ ಅಂಗಡಿಯವರು ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಆಲಮೇಲ ಭಾಗದಲ್ಲಿ ಜರುಗುವ ವಿವಿಧ ಧರ್ಮ ಜಾತಿ ಸಮುದಾಯಗಳ, ಹಬ್ಬ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನಾನುರಾಗಿದ್ದರು ಎಂದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಗುಂದಗಿ, ಯಶವಂತರಾಯಗೌಡ ರೂಗಿ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿದರು.
ವೇದಿಕೆ ಮೇಲೆ ಸಿಂದಗಿ ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್ ಮೂಲಿಮನಿ, ಎಸ್ಐ ಕಾಡಪ್ಪ ಜಕ್ಕಣ್ಣವರ, ಅನಿಲ ಮುನವಳ್ಳಿ, ಎಸ್ ಕೆ ವಾಘಮೊರೆ ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ಉಮರ್ ಬಿಳವಾರ, ಮಾಜಿ ಜಿಪಂ ಸದಸ್ಯ ಚಂದ್ರಶೇಖರ್ ನಾಗೂರ್, ಬಸವರಾಜ್ ತಾವರಗೇರೆ, ಅಯುಬ್ ದೇವರಮನಿ, ಸಿದ್ದಲಿಂಗ ಸುಬೇದಾರ್, ಜೈ ಭೀಮ್ ನಾಯ್ಕೋಡಿ, ಬಸವರಾಜ್ ತೆಲ್ಲೂರ, ವಿವಿಧ ಕನ್ನಡಪರ ಮತ್ತು ದಲಿತ ಸಂಘಟನೆಯ ಪದಾಧಿಕಾರಿಗಳು, ಪೊಲೀಸ್ ಠಾಣೆಯ ಸಿಬ್ಬಂದಿ, ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

