ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಒಳಪಡುವ ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕ ಹಾಗೂ ಅರೆಕಾಲಿಕ ಉಪನ್ಯಾಸಕರ ಹುದ್ದೆಗಳನ್ನು ೧೭೯ ದಿನಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸೂಕ್ತ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಕೃಷಿ ಮೈಕ್ರೋಬಯಾಲಜಿ (ಅಸಿಸ್ಟಂಟ್ ಪ್ರೊ. ಅಗ್ರಿಲ್ ಮೈಕ್ರೋಬಯಾಲಾಜಿ) ೦೧ ಹುದ್ದೆ (ಎಸ್ ಸಿ-೧), ಕೃಷಿ ಅರ್ಥಶಾಸ್ತ್ರ (ಅಸಿಸ್ಟಂಟ್ ಪ್ರೊ. ಅಗ್ರಿಲ್ ಎಕಾನಾಮಿಕ್ಸ್) ೦೧ ಹುದ್ದೆ (ಎಸ್ ಟಿ-೧) ಹಾಗೂ ತೋಟಗಾರಿಕೆ (ಅಸಿಸ್ಟಂಟ್ ಪ್ರೊ. ಹಾರ್ಟಿಕಲ್ಚರ್) ೦೧ ಹುದ್ದೆ (ಎಸ್ ಟಿ-೧) ಈ ಮೂರು ಹುದ್ದೆಗೆ ನೇರ ಸಂದರ್ಶನ ಸೆ.೧೧ರಂದು ಕ್ರಮವಾಗಿ ಬೆಳಿಗ್ಗೆ ೧೦, ಗಂಟೆ ಹಾಗೂ ಮಧ್ಯಾಹ್ನ ೨ ಗಂಟೆಗೆ. ನಡೆಯಲಿದೆ.
ಕೃಷಿ ವಿಸ್ತರಣೆ (ಅಸಿಸ್ಟಂಟ್ ಪ್ರೊ. ಅಗ್ರಿಲ್ ಎಕ್ಸಟೆನ್ಸನ್ : ೦೧ ಹುದ್ದೆ (ಎಸ್ ಟಿ-೧) ಸಂದರ್ಶನ ಸೆ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ, ಕನ್ನಡ ಅರೆಕಾಲಿಕ : ೦೧ ಹುದ್ದೆ (ಜಿಎಂ-೧) –ಸಂದರ್ಶನ ಸೆ.೧೨ರಂದು ಬೆಳಿಗ್ಗೆ ೧೧ ಗಂಟೆಗೆ. ನಡೆಯಲಿದೆ.
ಸಂಬಂಧಪಟ್ಟ ವಿಷಯಗಳಲ್ಲಿ ಶೇ. ೫೫ ಕ್ಕಿಂತ ಕಡಿಮೆ ಇಲ್ಲದಂತೆ (ಸೆಮಿಸ್ಟರ್ ಪದ್ಧತಿಯಲ್ಲಾದರೆ ಶೇ. ೭೦) ಸ್ನಾತಕೋತ್ತರ ಪದವಿ ಹೊಂದಿರಬೇಕು. ಜೊತೆಗೆ ಯುಜಿಸಿ/ಐಸಿಎಆರ್/ಸಿಎಸ್ ಐಆರ್ ನಡೆಸುವ ನೆಟ್, ಸ್ಲೆಟ್, ಎಸ್ ಇಟಿ ಪರೀಕ್ಷೆ ತೇರ್ಗಡೆಯಾಗಿರಬೇಕು ಅಥವಾ ಯುಜಿಸಿ ನಿಯಮಾವಳಿ ಪ್ರಕಾರ ಪಿಎಚ್ ಡಿ ಪದವಿ ಪಡೆದಿರಬೇಕು.
ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಕೃಷಿ ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಅಥವಾ ವಿಜಯಪುರದ ಕೃಷಿ ಮಹಾವಿದ್ಯಾಲಯದ ಡೀನ್ ಆವರಣ ಮುಖ್ಯಸ್ಥರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
