ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಅಂಚೆ ಇಲಾಖೆಯ ವಿಜಯಪುರ ಅಂಚೆ ವಿಭಾಗದ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಒಟ್ಟು ೩೪ ಗ್ರಾಮೀಣ ಡಾಕ್ ಸೇವಕ (ಜಿಡಿಎಸ್), ಶಾಖಾ ಅಂಚೆ ಪಾಲಕ (ಬಿಪಿಎಂ) ಹಾಗೂ ಸಹಾಯಕ ಅಂಚೆ ಪಾಲಕ (ಎಬಿಪಿಎಂ) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯು ೧೦ ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಆಗಸ್ಟ್ ೩೧ ರಿಂದ ಸೆಪ್ಟೆಂಬರ್ ೧೯ ರವರೆಗೆ ಆನ್‌ಲೈನ್ ಒನ್ ಟೈಮ್ ನೋಂದಣಿ (ಒಟಿಆರ್) ಮಾಡಲು ಅವಕಾಶ ನೀಡಲಾಗಿದೆ.
ಅದರಂತೆ, ಸೆಪ್ಟೆಂಬರ್ ೨ ರಿಂದ ಸೆಪ್ಟೆಂಬರ್ ೨೧ ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಸಲು ಸಮಯಾವಕಾಶ ಕಲ್ಪಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಿಡಿಎಸ್ ನೇಮಕಾತಿ ಪೋರ್ಟಲ್ iಟಿಜiಚಿಠಿosಣ.gov.iಟಿ/gಜsoಟಿಟiಟಿeeಟಿgಚಿgemeಟಿಣ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಎಂ. ಎಸ್. ತೊಗರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
