ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಡಿ.ಪಿ.ಹೆಚ್.ಡಬ್ಲ್ಯೂ.ಎ. ಐಟಿಐ ಖೇಡ ಕಾಲೇಜು ಆವರಣದಲ್ಲಿ ಸೆ.೨ರಂದು ಬೆಳಗ್ಗೆ ೯ ರಿಂದ ಸಂಜೆ ೫ರವರೆಗೆ ಶಿಶಿಕ್ಷು ಮೇಳ ಆಯೋಜಿಸಲಾಗಿದೆ.
ಐಟಿಐ ಸೇರಿದಂತೆ ವಿವಿಧ ತರಬೇತಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಂಠಿಠಿಡಿeಟಿಣiಛಿeshiಠಿ Iಟಿಜiಚಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಉದ್ದಿಮೆದಾರರು ಸಹ ಇsಣಚಿbಟishmeಟಿಣ ಖegisಣಡಿಚಿಣioಟಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಮೇಳದ ಪ್ರಯೋಜನ ಮಡೆದುಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ನಾಲ್ಕು ಪ್ರತಿಗಳ ಬಯೋಡಾಟಾ, ಅಗತ್ಯ ದಾಖಲೆ ಹಾಗೂ ಭಾವಚಿತ್ರದೊಂದಿಗೆ ಮೇಳಕ್ಕೆ ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೮೦೭೩೩೪೧೫೦೫ ಸಂಪರ್ಕಿಸಬಹುದು ಅಥವಾ ಹತ್ತಿರದ ಯಾವುದೇ ಸರ್ಕಾರಿ, ಅನುದಾನಿತ ಅಥವಾ ಖಾಸಗಿ ಐಟಿಐಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
