ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ (ಕೆ ಏಸ್‌ಆರ್‌ಏಲ್‌ಪಿಎಸ್) ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ವಸಹಾಯ ಗುಂಪುಗಳ ಸಕ್ರಿಯ ಸದಸ್ಯರಿಂದ ‘ಪೋಸ್ಟಲ್ ಸಖಿ’ (ಪಿಎಲ್ ಐ, ಆರ್ ಪಿಎಲ್ ಐ ನೇರ ಏಜೆಂಟರು) ಹುದ್ದೆಗಳ ಆಯ್ಕೆಗೆ ನೇರ ಸಂದರ್ಶನ ಆ.೨೪ ರಂದು ಬೆಳಗ್ಗೆ ೧೧ ಗಂಟೆಗೆ ಸ್ಟೇಶನ್ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಆಯ್ಕೆಯಾದ ಅಭ್ಯರ್ಥಿಗಳು ಅಂಚೆ ಇಲಾಖೆಯ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (ಪಿಏಲ್‌ಐ) ಮತ್ತು ಗ್ರಾಮೀಣ ಅಂಚೆ ಜೀವವಿಮೆ (ಆರ್‌ಪಿಏಲ್‌ಐ)) ಸೇವೆಗಳನ್ನು ಗ್ರಾಮೀಣ ಭಾಗದ ಮನೆ-ಮನೆಗೆ ತಲುಪಿಸುವ ಮೂಲಕ ಆದಾಯ ಗಳಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಅರ್ಹತೆಗಳು: ಸ್ವಸಾಹಾಯ ಸಂಘದ ಸಕ್ರಿಯ ಸದಸ್ಯೆಯಾಗಿರಬೇಕು. ಕನಿಷ್ಠ ೧೦ನೇ ತರಗತಿ ಉತ್ತೀರ್ಣರಾಗಿರಬೇಕು. ಸ್ಮಾರ್ಟ್ಫೋನ್ ಬಳಕೆ ಹಾಗೂ ಸ್ಥಳೀಯ ಭಾಷಾ ಜ್ಞಾನ ಕಡ್ಡಾಯ ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ೩ ಪಾಸ್‌ಪೋರ್ಟ್ ಅಳತೆಯ ಫೋಟೋಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಹಾಗೂ ಸ್ವಸಹಾಯ ಸಂಘದ ಗುರುತಿನ ಚೀಟಿಯ ನಕಲು ಪ್ರತಿಗಳನ್ನು ತರತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಯನ ಮೊಬೈಲ್ ಸಂಖ್ಯೆ ೮೯೭೧೧೨೭೭೭೨ ಸಂಪರ್ಕಿಸಬಹುದು ಎಂದು ವಿಜಯಪುರ ಅಂಚೆ ವಿಭಾಗದ ಪ್ರಕಟಣೆ ತಿಳಿಸಿದೆ.
