ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಶಲ್ಯ ತಂತ್ರ ವಿಭಾಗದ ವತಿಯಿಂದ ಅಗ್ನಿಕರ್ಮಚಿಕಿತ್ಸೆ ಕುರಿತು ಆರು ದಿನಗಳ ಉಚಿತ ಶಿಬಿರ ಆಗಷ್ಟ 24 ರಿಂದ ಆಗಷ್ಟ 29ರ ವರೆಗೆ ನಡೆಯಲಿದೆ.
ಬಿ.ಎಲ್.ಡಿ.ಇ ಆಯುರ್ವೇದ ಹೈಟೆಕ್ ಆಸ್ಪತ್ರೆಯ ನಡೆಯಲಿರುವ ಈ ಶಿಬಿರದಲ್ಲಿ ಬೆನ್ನು ನೋವು, ಭುಜ ನೋವು, ಕತ್ತು ನೋವು , ಹಿಮ್ಮಡಿ ನೋವು, ಸಂಧಿ ನೋವು ಮುಂತಾದವುಗಳಿಗೆ ಉಚಿತ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು.
ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಮೊ. ನಂ. 9513397413 ಸಂಪರ್ಕಿಸಬಹುದಾಗಿದೆ.
