Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಂತಿಮ ಹಂತ ತಲುಪಿದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

ಸರಕಾರಿ ಸೌಲಭ್ಯ ಸದ್ಬಳಕೆಯಿಂದ ಗುರಿ ತಲುಪಿ :ಬಿರಾದಾರ

ದೇವರಾಜ ಅರಸು ಚಿಂತನೆಗಳು ಇಂದಿಗೂ ಪ್ರಸ್ತುತ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೇವಲ 5 ಗಂಟೆಯಲ್ಲೇ ೧೧ಎಕರೆ ಜಮೀನು ಹರಗಿದ ರೈತ ಗುರುಪಾದ
(ರಾಜ್ಯ ) ಜಿಲ್ಲೆ

ಕೇವಲ 5 ಗಂಟೆಯಲ್ಲೇ ೧೧ಎಕರೆ ಜಮೀನು ಹರಗಿದ ರೈತ ಗುರುಪಾದ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬೂದಿಹಾಳ ಪಿಎಚ್ ಗ್ರಾಮದ ರೈತನ ಜೋಡೆತ್ತುಗಳ ಅಪ್ರತಿಮ ಸಾಧನೆಗೆ ಜನರ ಮೆಚ್ಚುಗೆ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಶೈಕ್ಷಣಿಕ ಕಾಶಿಯ ಸಿಂದಗಿ ತಾಲೂಕಿನ ರೈತರು ಮುಂಗಾರು ಆರಂಭವಾಗುತ್ತಿದ್ದಂತೆ ಕೈಗೊಳ್ಳುವ ಕೃಷಿ ಚಟುವಟಿಗಳು ನಾನಾ ಸಾಧನೆಗಳಿಗೆ ಪ್ರೇರೆಪಿಸುತ್ತಿವೆ. ಇಂತಹದ್ದೆ ಸಾಧನೆಯೊಂದನ್ನು ಸಿಂದಗಿ ತಾಲೂಕಿನ ಬೂದಿಹಾಳ ಪಿಹೆಚ್ ಗ್ರಾಮದ ರೈತ ಮತ್ತು ಆತನ ಎತ್ತುಗಳು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನಾಗರ ಪಂಚಮಿ ಮತ್ತು ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರೈತ ಗುರುಪಾದ ಚೌಧರಿ ತನ್ನ ಜೋಡೆತ್ತುಗಳಿಗೆ ನೊಗಕಟ್ಟಿ ತಮ್ಮ ಜೋಡಿ ಎತ್ತುಗಳೊಂದಿಗೆ ಕೇವಲ ೫ಗಂಟೆಯಲ್ಲಿಯೇ ಒಂಟಿ ದಿಂಡಿನ ಸಹಾಯದಿಂದ ೧೧ ಎಕರೆ ಜಮೀನು ಹರಗಿ ಗಮನ ಸೆಳೆದಿದ್ದಾರೆ.
ಪಂಚಮಿ ಬಂತೆಂದರೆ ಸಾಕು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರೈತರು ತಮ್ಮ ಜಾನುವಾರುಗಳ ಮೂಲಕ ವಿವಿಧ ಸಾಧನೆ ಮಾಡುತ್ತಾರೆ. ಅಂತೆಯೇ ಈ ರೈತ ತನ್ನ ಊರಾದ ಬೂದಿಹಾಳ ಗ್ರಾಮದಲ್ಲಿ ೫ಗಂಟೆಯಲ್ಲಿ ೧೧ಎಕರೆ ಜಮೀನು ಹರಗುವ ಮೂಲಕ ರೈತರು ಮೆಚ್ಚುವ ಸಾಧನೆ ಮಾಡಿದ್ದಾರೆ.
ಕೃಷಿಕ ಈ ಸಾಧನೆ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಬೂದಿಹಾಳ ಗ್ರಾಮದ ರೈತರು ಆಗಮಿಸಿದ್ದಾರೆ. ಅಲ್ಲದೇ, ರೈತ ಮತ್ತು ಆತನ ಜೋಡೆತ್ತುಗಳ ಸಾಧನೆಗಳನ್ನು ಕಣ್ತುಂಬಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಗ್ರಾಮದ ಜನರೂ ಕೂಡ ತಮ್ಮೂರಿನ ಹೆಮ್ಮೆಯ ರೈತ ಹಾಗೂ ಆತನ ಎತ್ತುಗಳಿಗೆ ಗುಲಾಲು (ಬಣ್ಣ) ಹಚ್ಚಿ ಸಂಭ್ರಮಾಚರಣೆ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಗುರುಪಾದ ಚೌಧರಿ, ಕಳೆದ ಹಲವು ವರ್ಷಗಳಿಂದ ಭೂಮಿಯನ್ನು ಹರಗುತ್ತಲೇ ಬಂದಿದ್ದೆ, ಆದರೆ ಸಂಭ್ರಮಾಚರಣೆ ಮಾಡಿರಲಿಲ್ಲ. ಮನೆಯಲ್ಲಿ ದನಕರುಗಳು ಇರಬೇಕು. ಹಂಬಲದಿಂದ ಎತ್ತುಗಳನ್ನು ಕಟ್ಟಬೇಕು. ಸಾಂಪ್ರದಾಯಿಕ ಕೃಷಿ ಪದ್ಧತಿ ಉಳಿಯಬೇಕು ಎಂಬ ಸದುದ್ದೇಶದಿಂದ ಪ್ರಯತ್ನ ಮಾಡಿದ್ದೇನೆ. ಆಧುನಿಕ ಯಂತ್ರೋಪಕರಣಗಳಿಗೆ ಹೆಚ್ಚು ಮಾರು ಹೋಗದೇ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ರೈತರು ಉಪಯೋಗಿಸಬೇಕು. ಎರಡೆತ್ತುಗಳು ಮನೆಯಲ್ಲಿದ್ದರೆ ಅದಕ್ಕೊಂದು ಸಿರಿಯೇ ಬೇರೆ ಎಂದರು.
ಈ ರೈತ ಸಾಧನೆಯ ಬಗ್ಗೆ ಗ್ರಾಮದ ರೈತರಾದ ಶರಣಗೌಡ ಬಿರಾದಾರ ಮತ್ತು ಶಿವನಗೌಡ ಬಿರಾದಾರ ಸಂತಸ ವ್ಯಕ್ತಪಡಿಸಿದ್ದು, ಈ ರೈತ ತಮ್ಮೂರಿಗೆ ಕೀರ್ತಿ ತಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಂತಿಮ ಹಂತ ತಲುಪಿದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ

ಸರಕಾರಿ ಸೌಲಭ್ಯ ಸದ್ಬಳಕೆಯಿಂದ ಗುರಿ ತಲುಪಿ :ಬಿರಾದಾರ

ದೇವರಾಜ ಅರಸು ಚಿಂತನೆಗಳು ಇಂದಿಗೂ ಪ್ರಸ್ತುತ

‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ ಪುರಸ್ಕೃತ ಮಠೋಳಿ ಗೆ ಸನ್ಮಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಂತಿಮ ಹಂತ ತಲುಪಿದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ
    In (ರಾಜ್ಯ ) ಜಿಲ್ಲೆ
  • ಸರಕಾರಿ ಸೌಲಭ್ಯ ಸದ್ಬಳಕೆಯಿಂದ ಗುರಿ ತಲುಪಿ :ಬಿರಾದಾರ
    In (ರಾಜ್ಯ ) ಜಿಲ್ಲೆ
  • ದೇವರಾಜ ಅರಸು ಚಿಂತನೆಗಳು ಇಂದಿಗೂ ಪ್ರಸ್ತುತ
    In (ರಾಜ್ಯ ) ಜಿಲ್ಲೆ
  • ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ ಪುರಸ್ಕೃತ ಮಠೋಳಿ ಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಕೇವಲ 5 ಗಂಟೆಯಲ್ಲೇ ೧೧ಎಕರೆ ಜಮೀನು ಹರಗಿದ ರೈತ ಗುರುಪಾದ
    In (ರಾಜ್ಯ ) ಜಿಲ್ಲೆ
  • 4 ದಿನ ಪೂರೈಸಿದ ಬಿಜೆಪಿ ಧರಣಿ ಸತ್ಯಾಗ್ರಹ ಅಂತ್ಯ
    In (ರಾಜ್ಯ ) ಜಿಲ್ಲೆ
  • ಕೂಡಗಿ ಎನ್‌ಟಿಪಿಸಿಯಿಂದ ವಿಶೇಷಚೇತನರಿಗೆ ಸಾಧನಗಳ ವಿತರಣೆ
    In (ರಾಜ್ಯ ) ಜಿಲ್ಲೆ
  • ಎ.ವಿ.ಎಸ್. ಆಯುರ್ವೇದ ಕಾಲೇಜ್: ಆ.24 ರಿಂದ ಆರೋಗ್ಯ ಶಿಬಿರ
    In (ರಾಜ್ಯ ) ಜಿಲ್ಲೆ
  • ಅಶ್ವಿನಿ ಹತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ :ನಿಮಾದಾರ
    In (ರಾಜ್ಯ ) ಜಿಲ್ಲೆ
  • ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ: ಜನಜಾಗೃತಿ ಪಾದಯಾತ್ರೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.