ಲೇಖನ
*- *ಡಾ ಶಶಿಕಾಂತ ಪಟ್ಟಣ*
ರಾಮದುರ್ಗ – ಪುಣೆ
ಉದಯರಶ್ಮಿ ದಿನಪತ್ರಿಕೆ
ಇತ್ತೀಚೆಗೆ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ಸಂಪೂರ್ಣ ನೆಲ ಕಚ್ಚಿದೆ.
2018 ರಲ್ಲಿ ಸುನಾಮಿ ತರಹ ಹುಟ್ಟಿಕೊಂಡ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಚಳುವಳಿ ಸಂವಿಧಾನಾತ್ಮಕ ನ್ಯಾಯ ಸಮ್ಮತ ಕಾನೂನು ಸಮ್ಮತ ಇದ್ದರೂ ಸಹಿತ ಹಲವು ಕಾರಣಗಳಿಂದ ನೆಲ ಕಚ್ಚಿದೆ. ಈ ಚಳುವಳಿಯ ಮೂಲ ಉದ್ದೇಶದಿಂದ ನಾವು ಅಂದ್ರೆ ಬಸವ ಪ್ರಣೀತಾ ಸಮಾಜ ಲಿಂಗಾಯತ ಸಮಾಜ ಸಂಪೂರ್ಣ ತನ್ನ ಬೇಡಿಕೆ ಈಡೇರಿಸುವ ಕನಸು ನುಚ್ಚು ನೂರಾಗುತ್ತಿದೆ.
ಇದು ಒಂದು ರಾಜಕೀಯ ಪಕ್ಷಗಳ ಹೋರಾಟವೇ?
ಹೌದು ಲಿಂಗಾಯತ ಧರ್ಮದವರ ಮತಗಳನ್ನು ಸೆಳೆಯಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅಂದಿನ ಬಹುತೇಕ ಶಾಸಕರನ್ನು ಮಂತ್ರಿಗಳನ್ನು ಈ ಲಿಂಗಾಯತ ಧರ್ಮದ ಮಾನ್ಯತೆ ಚಳುವಳಿಗೆ ಉದಾರವಾಗಿ ಬಿಟ್ಟರು.
ಆವಾಗಲೇ ಹುಟ್ಟಿಕೊಂಡದ್ದು ಬಸವ ಸೇನೆ, ಜಾಗತಿಕ ಲಿಂಗಾಯತ ಮಹಾಸಭೆ
ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಲು ಆಗದೆ ಬಸವ ಸೇನೆ ಹೆಸರಿಲ್ಲದೆ ಮಾಯವಾಯಿತು.
ಇನ್ನು ಜಾಗತಿಕ ಲಿಂಗಾಯತ ಮಹಾಸಭೆ ಲಿಂಗಾಯತ ಧರ್ಮದ ಅರಿವು ತಕ್ಕ ಮಟ್ಟಿಗೆ ಮೂಡಿಸಿದೆ ಹೊರತು ಮೂಲ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗಿಲ್ಲ.
ಒಬ್ಬರೇ ವಕ್ತಾರರು ಅಧಿಕಾರಿಗಳು ಭಾಷಣ, ಟಿವಿ, ಚರ್ಚೆ, ಪುಸ್ತಕ ರಚನೆಗೆ ಮುಂದಾದರು. ಜಾಗತಿಕ ಲಿಂಗಾಯತ ಮಹಾಸಭೆ ಕಾಂಗ್ರೆಸ್ ಪಕ್ಷದ ಮುಖವಾಣಿ ಎಂಬ ಗುಲ್ಲು ಎದ್ದಿತು. ಹೀಗಾಗಿ ಬಿಜೆಪಿ ಲಿಂಗಾಯತ ಸಮುದಾಯದ ಮುಖಂಡರು ಲಿಂಗಾಯತ ಮತಗಳನ್ನು ಸೆಳೆಯಲು ಉಳಿಸಿಕೊಳ್ಳಲು
ಕೆಲ ಲಿಂಗಾಯತ ಕಾವಿಧಾರಿಗಳಿಂದ ಹಲವು ರೀತಿಯ ಆಕ್ರಮಣ ಮಾಡಿಸಹತ್ತಿದರು.
ಲಿಂಗಾಯತ ತತ್ವ ಸಿದ್ಧಾಂತಗಳ ಮೇಲೆ ನಿರಂತರ ಪ್ರಹಾರ
ವಚನ ದರ್ಶನ ಎಂಬ ಕೆಳ ಪ್ರಕ್ಷಿಪ್ತ ವಚನಗಳ ಆಧಾರದ ಮೇಲೆ ಸಂಘ ಪರಿವಾರದ ಸದಸ್ಯರು, ಸ್ವಾಮಿಗಳು, ಕೆಲ ಬಲಪಂಥೀಯ ಸ್ವಾಮಿಗಳು, ಸಂಶೋಧಕರು ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದ ಒಂದು ಭಾಗ ಎಂದು ಬಿಂಬಿಸಲು ಹೊರಟರು. ವೀಣಾ ಬನ್ನಂಜೆ, ಸದಾಶಿವ ಸ್ವಾಮೀಜಿ, ಕನ್ನೇರಿ ಸ್ವಾಮಿಯ ಸಹಾಯದಿಂದ ಲಿಂಗಾಯತರನ್ನು ದಿಕ್ಕು ತಪ್ಪಿಸಿ ತಮ್ಮ ಮೂಲ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲಾಯಿತು.
ಲಿಂಗಾಯತ ಧರ್ಮದ ವಿರೋಧಿ ಲೇಖನಗಳ ಪ್ರಕಟ
ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ವಿರೂಪಗೊಳಿಸುವ ಹುನ್ನಾರ ಅಥವಾ ಕೆಲ ಜಾತಿವಾದಿಗಳಿಂದ ಪ್ರಕ್ಷಿಪ್ತ ವಚನಗಳ ಮೂಲಕ ತಮಗೆ ಬೇಕಾದ ಹಾಗೆ ಲೇಖನ ಬರೆಯಹತ್ತಿದರು. ಇದು ಎಲ್ಲಿಯವರೆಗೆ ಹೋಯಿತೆಂದರೆ ಲಿಂಗಾಯತ ಚಳುವಳಿಯ ನಾಯಕರ ವ್ಯಕ್ತಿಗತ ಚರಿತ್ರೆ ಬಗ್ಗೆ ಟೀಕೆ ಟಿಪ್ಪಣಿಗಳು ಬರಹತ್ತಿದವು.
ಜನಮೇಜಯ ಉಮರ್ಜಿ ಒಬ್ಬ ವೈದಿಕ ವ್ಯವಸ್ಥೆಯ ವ್ಯಕ್ತಿ ಲಿಂಗಾಯತ ಧರ್ಮದ ಪಂಚಾಚಾರ ಅಷ್ಟಾವರಣ ಷಟ್ ಸ್ಥಳ ಮುಂತಾದವುಗಳ ಬಗ್ಗೆ ತಳ ಬಿಡುವಿಲ್ಲದೆ ಟೀಕಿಸುವ ವಿಮರ್ಶಿಸುವ ಕಾರ್ಯ ಮಾಡುತ್ತಿದ್ದಾರೆ. ಕರ್ನಾಟಕದ ಒಂದು ಪತ್ರಿಕೆ ಲಿಂಗಾಯತ ಧರ್ಮದ ವಿರೋಧಿ ಲೇಖನಗಳನ್ನು ನಿರಂತರ ಪ್ರಕಟ ಮಾಡುತ್ತಿದ್ದು ವಿಶ್ವೇಶ್ವರ ಭಟ್
ಇಂತಹವರನ್ನು ಮತ್ತು ನಾಡಿನ ಹಿರಿಯ ಸಂಶೋಧಕ ಗೋರುಚೆ ಅವರ ಜೊತೆಗೆ ಡಾ ವೀರಣ್ಣ ರಾಜೂರವಂತವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿಷ್ಕ್ರಿಯಗೊಂಡ ಮಠಗಳು
ನಿಷ್ಕ್ರಿಯಗೊಂಡ ಅಥವಾ ಬಸವತತ್ವದಿಂದ ವಿಮುಖಗೊಂಡ ಮಠಗಳು ಎಂದರೆ, 12ನೇ ಶತಮಾನದಲ್ಲಿ ಜಗದ್ಗುರು ಬಸವಣ್ಣನವರು ಮತ್ತು ಶರಣರು ಪ್ರತಿಪಾದಿಸಿದ ಪ್ರಗತಿಪರ, ಜಾತಿರಹಿತ ಮತ್ತು ಅವೈದಿಕ ತತ್ವಗಳನ್ನು ಮರೆತು, ಕೇವಲ ಸಾಂಪ್ರದಾಯಿಕ ಆಚರಣೆಗಳಿಗೆ ಸೀಮಿತವಾಗಿರುವ ಮಠಗಳನ್ನು ಸೂಚಿಸುತ್ತದೆ. ಐತಿಹಾಸಿಕವಾಗಿ ಬಸವಣ್ಣನವರು ಯಾವುದೇ ನಿರ್ದಿಷ್ಟ “ಸ್ಥಾವರ” ಮಠದ ಪೀಠಾಧಿಪತಿಯಾಗಿರಲಿಲ್ಲ. ಅವರು ಸ್ಥಾಪಿಸಿದ್ದು ಜಗತ್ತಿನ ಮೊದಲ ಸಂಸತ್ತು ಎನಿಸಿದ ಅನುಭವ ಮಂಟಪ ಎಂಬ ವೈಚಾರಿಕ ಕೇಂದ್ರವನ್ನು ಮಾತ್ರ. ಆದರೆ, ಕಾಲಕ್ರಮೇಣ ಬಸವತತ್ವದ ಹೆಸರಿನಲ್ಲಿ ಹುಟ್ಟಿಕೊಂಡ ಅನೇಕ ಲಿಂಗಾಯತ ಮಠಗಳು ಇಂದು ತಮ್ಮ ಮೂಲ ಆಶಯದಿಂದ ದೂರ ಸರಿದು ನಿಷ್ಕ್ರಿಯಗೊಂಡಿವೆ ಅಥವಾ ವ್ಯವಸ್ಥೆಯ ಭಾಗವಾಗಿ ಬದಲಾಗಿವೆ ಎಂಬ ವ್ಯಾಪಕ ಚರ್ಚೆ ಮತ್ತು ವಿಮರ್ಶೆ ಸಮಾಜದಲ್ಲಿದೆ. ಬಸವ ಪರ ಮಠಗಳು ನಿಷ್ಕ್ರಿಯಗೊಳ್ಳಲು ಅಥವಾ ತತ್ವಚ್ಯುತಿ ಹೊಂದಲು ಪ್ರಮುಖ ಕಾರಣಗಳು ಮತ್ತು ಪ್ರಸ್ತುತ ಸ್ಥಿತಿ ಈ ಕೆಳಗಿನಂತಿದೆ
1. ವೈದಿಕೀಕರಣ ಮತ್ತು ಸ್ಥಾವರ ಸಂಸ್ಕೃತಿಬಸವತತ್ವಕ್ಕೆ ವಿಮುಖ
ಬಸವಣ್ಣನವರು “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂದು ಮೂರ್ತಿ ಪೂಜೆ, ಗುಡಿ ಸಂಸ್ಕೃತಿಯನ್ನು ವಿರೋಧಿಸಿದ್ದರು. ಆದರೆ ಇಂದಿನ ಬಹುತೇಕ ಮಠಗಳು ಬಸವಪ್ರಜ್ಞೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸಿ, ವೈದಿಕ ಪರಂಪರೆಯ ಕರ್ಮಕಾಂಡಗಳನ್ನು ಅಳವಡಿಸಿಕೊಂಡು ತತ್ವ ನಿಷ್ಠೆಯಲ್ಲಿ ನಿಷ್ಕ್ರಿಯಗೊಂಡಿವೆ.
೨.ಮಠಗಳ ವೀರಶೈವೀಕರಣ
ಮೂಲ ಲಿಂಗಾಯತ ಮಠಗಳು ಕ್ರಮೇಣ ಸನಾತನ ಶೈವ ಅಥವಾ ವೀರಶೈವ ಮಠಗಳಾಗಿ ಪರಿವರ್ತನೆಗೊಂಡು ಬಸವಣ್ಣನವರ ಇತಿಹಾಸ ಮತ್ತು ವಚನ ಕ್ರಾಂತಿಯನ್ನು ಕಡೆಗಣಿಸಿರುವುದು ಸಮಾಜದ ಪ್ರಗತಿಪರ ಚಿಂತಕರ ಟೀಕೆಗೆ ಕಾರಣವಾಗಿದೆ.
೩. ಉತ್ತರಾಧಿಕಾರಿಗಳ ಕೊರತೆ ಮತ್ತು ಆಡಳಿತ ಜಡತ್ವಮುಚ್ಚಿಹೋಗುತ್ತಿರುವ ಸಣ್ಣ ಮಠಗಳು
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿದ್ದ ನೂರಾರು ಸಣ್ಣ ವಿರಕ್ತ ಮಠಗಳು ಸರಿಯಾದ ಪೀಠಾಧಿಪತಿಗಳಿಲ್ಲದೆ, ಉತ್ತರಾಧಿಕಾರಿಗಳ ಕೊರತೆಯಿಂದಾಗಿ ಭೌತಿಕವಾಗಿ ನಿಷ್ಕ್ರಿಯಗೊಂಡಿವೆ (ಬೀಗ ಹಾಕಲ್ಪಟ್ಟಿವೆ).ಆಸ್ತಿ ಪಾಸ್ತಿ ವಿವಾದ: ಕೆಲವು ಮಠಗಳು ಕೇವಲ ಭೂಮಿ, ಆಸ್ತಿ ಮತ್ತು ಅಧಿಕಾರದ ಕೇಂದ್ರಗಳಾಗಿ ಬದಲಾಗಿ ಧಾರ್ಮಿಕ ಮತ್ತು ಸಾಮಾಜಿಕ ದಾಸೋಹ ಕಾರ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಿವೆ
೪. ಸಾಮಾಜಿಕ ಜವಾಬ್ದಾರಿಯಿಂದ ದೂರ ಸರಿದಿರುವುದು
ಶರಣ ಚಳುವಳಿಯ ಮುಖ್ಯ ಉದ್ದೇಶ ಜಾತಿ ಪದ್ಧತಿಯ ನಿರ್ಮೂಲನೆಯಾಗಿತ್ತು. ಆದರೆ ಪ್ರಸ್ತುತ ಅನೇಕ ದೊಡ್ಡ ಮಠಗಳು ತಮ್ಮದೇ ಆದ ಜಾತಿಯ ಹಿತರಕ್ಷಣೆ ಮತ್ತು ರಾಜಕೀಯ ಲಾಭಕ್ಕಾಗಿ ಸೀಮಿತವಾಗಿ, ಸಮಾಜದ ಶೋಷಿತ ವರ್ಗಗಳ ಪರವಾಗಿ ಧ್ವನಿ ಎತ್ತುವಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿವೆ.ಇಂದಿನ ಪ್ರಸ್ತುತತೆ ಮತ್ತು ಪುನಶ್ಚೇತನದ ಅಗತ್ಯಪ್ರಸ್ತುತ ಸಮಾಜದಲ್ಲಿ ಇಂತಹ ನಿಷ್ಕ್ರಿಯತೆ ಅಥವಾ ಜಡತ್ವವನ್ನು ಹೋಗಲಾಡಿಸಲು ವಿರಕ್ತ ಮಠಗಳು ಒಟ್ಟಾಗಿ ಬಸವಕಲ್ಯಾಣದ ಹೊಸ ಅನುಭವ ಮಂಟಪದ ನಿರ್ವಹಣೆಯನ್ನು ವಹಿಸಿಕೊಳ್ಳಬೇಕು ಮತ್ತು ವಚನ ಸಾಹಿತ್ಯದ ನಿಜವಾದ ಪ್ರಚಾರಕ್ಕೆ ಮುಂದಾಗಬೇಕು ಎಂಬ ಆಂದೋಲನಗಳು ನಡೆಯುತ್ತಿವೆ.
ಮಠಗಳಲ್ಲಿ ನಡೆಯುವ ಅವಾಂತರ
ಇತ್ತೀಚೆಗೆ ಧಾರವಾಡದ ಮುರುಘಾ ಮಠದಲ್ಲಿ ದ್ಯಾಮವ್ವನ ದುರ್ಗವ್ವನ ಜಾತ್ರೆ ಮಾಡಿಸಿ ಅದರ ಸಾನಿಧ್ಯ ವಹಿಸಿದಾಗ ಯಾರೂ ತುಟಿ ಬಿಚ್ಚಲಿಲ್ಲ.
ನಾಡಿನ ಅನೇಕ ಮಠಗಳು ಲೈಂಗಿಕ ಹಗರಣಗಳು ಮತ್ತು ಪೋಕ್ಸೋ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದರೆ ಇನ್ನೂ ಅನೇಕ ಮಠಗಳು ಸ್ವಾಮಿಗಳು ಭಕ್ತರಿಂದ ಹಲ್ಲೆಗೆ ಒಳಗಾಗಿದ್ದಾರೆ. ಒಳಪಂಗಡಗಳ ಮಠಗಳು ಲಿಂಗಾಯತ ಮತ್ತು ಅವುಗಳ ಉಪ ಜಾತಿ ಬರೆಸಲು ಹೇಳದೆ
ಹಿಂದೂ ಹೇಳಿ ಲಿಂಗಾಯತ ಸಾದರ ಪಂಚಮಸಾಲಿ ಬಣಜಿಗ ನೊಣಬ ಇತ್ಯಾದಿಯಾಗಿ ಆದೇಶ ಹೊರಡಿಸಿದರು.
ಮಠಗಳು ವಾಣಿಜ್ಯ ಮಳಿಗೆಗಳಾಗಿವೆ.
ಒಳ ಮೀಸಲಾತಿ ಬೇಡಿಕೆ ಲಿಂಗಾಯತ ಧರ್ಮದ ಮಾನ್ಯತೆ ಹೋರಾಟಕ್ಕೆ ಮುಳುವಾಯಿತು.
ಕನ್ನೇರಿ ಸ್ವಾಮಿಗಳು ಅತ್ಯಂತ ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿದರೂ ಯಾರು ಅವರ ವಿರುದ್ಧ ನಿರೀಕ್ಷೆಯ ಮಟ್ಟಕ್ಕೆ ಹೋರಾಡಲಿಲ್ಲ .

ಪ್ರಚಾರಕ್ಕಾಗಿ ಕೆಲವರು ಬಸವ ಶೈವ ಹಿಂದೂ ಧರ್ಮ ಎಂಬ ಪುಸ್ತಕ ಶರಣರ ಶಕ್ತಿ ಮತ್ತು ಅಕ್ಕ ಮಹಾದೇವಿ ಎಂಬ ಚಲನಚಿತ್ರಗಳು ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ನಿರಂತರ ಮಾಡುತ್ತಿದ್ದಾರೆ.
ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಅರ್ಥ ರಹಿತ ಕಾರ್ಯಕ್ರಮಗಳಲ್ಲಿ ಕನ್ನೇರಿ ಸ್ವಾಮಿಯ ನೇತೃತ್ವದಲ್ಲಿ ಪಂಚಪೀಠ ಸ್ವಾಮಿಗಳು ಮತ್ತು ಸಂಘ ಪರಿವಾರದ ಸದಸ್ಯರ ಸಹಾಯದೊಂದಿಗೆ ಕರ್ನಾಟಕದಲ್ಲಿ 2028 ಬಿಜೆಪಿಯನ್ನು ಶತಾಯ ಗತಾಯ ಆಡಳಿತ ಅಧಿಕಾರಕ್ಕೆ ತರಲು ಯೋಜನೆ ರೂಪಿಸಲಾಗಿದೆ.
ಸಂಘ ಪರಿವಾರದ ಸದಸ್ಯರ ಮತ್ತು ಬಿಜೆಪಿ ನಾಯಕರ ಕಟ್ಟರ್ ಹಿಂದುತ್ವಕ್ಕಿಂತ ಕಾಂಗ್ರೆಸ್ ಪಕ್ಷದ ನಾಯಕರ ಮೃದು ಹಿಂದುತ್ವ ಧೋರಣೆ ಹೆಚ್ಚು ಅಪಾಯಕಾರಿಯಾಗಿದೆ.
ಬಸವ ಕಲ್ಯಾಣ ಸಂಘ ಪರಿವಾರದ ಕ್ಷೇತ್ರವಾಗುತ್ತಿದೆ.
1000 ಕೋಟಿ ಖರ್ಚು ಮಾಡಿ ಕಟ್ಟುವ ಅನುಭವ ಮಂಟಪವು ಮುಂದೊಂದು ದಿನ ದೇಶದ ಎರಡನೆಯ ನಾಗಪುರ ಆಗುವುದರಲ್ಲಿ ಎರಡು ಮಾತಿಲ್ಲ.
ಇದಕ್ಕೆ ಮೊನ್ನೆ ಬಸವಣ್ಣನವರ 108 ಅಡಿ ಪುತ್ಥಳಿಯ ಎದುರಿಗೆ ಲಿಂಗಾಯತ ಬಿಜೆಪಿ ನಾಯಕರು ಮತ್ತು ಸಂಘ ಪರಿವಾರದ ಸದಸ್ಯರು ತಮ್ಮ ಆರ್ ಎಸ್ ಎಸ್ ಗೀತೆ ಹಾಡಿ
ಬಸವಣ್ಣನವರ ಕೊರಳಿಗೆ ಜನಿವಾರ ಹಾಕುವ ತಯಾರಿಯಲ್ಲಿದೆ. ಏಕೆ ಜಾಗತಿಕ ಲಿಂಗಾಯತ ಮಹಾಸಭೆ ಮಠಾಧೀಶರ ಒಕ್ಕೂಟ ಮೌನ ಡಾ ಬಸವಲಿಂಗ ಸ್ವಾಮೀಜಿಯವರು ಅಷ್ಟೊಂದು ಅಸಹಾಯಕರೇ?
ಡಾ ಗಂಗಾಮಾತಾಜಿ ಅಲ್ಲಿನ ಶ್ರೀ ಸಿದ್ಧರಾಮ ಸ್ವಾಮೀಜಿ ಇದಕ್ಕೆ ಏನು ಉತ್ತರ ಕೊಡುತ್ತಾರೆ.
ಲಿಂಗಾಯತ ಧರ್ಮದ ಮಾನ್ಯತೆ ವಿರೋಧಿಸುವ ರಂಭಾಪುರಿ ಶ್ರೀಗಳ ಮಠ ನಿರ್ಮಾಣಕ್ಕೆ ನಮ್ಮ ನಾಯಕರು ವಿಸ್ತೀರ್ಣ ನಿವೇಶನ ಕೊಟ್ಟು ಗುದ್ದಲಿ ಪೂಜೆಗೆ ನಮ್ಮ ಲಿಂಗಾಯತ ನಾಯಕರು ಹೋಗಿದ್ದರು.
ಅತ್ತ ಭಾಲ್ಕಿ ಸ್ವಾಮೀಜಿ ವಚನ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಸರಕಾರದಿಂದ 25 ಎಕರೆ ಭೂಮಿಯನ್ನು ಮಂಜೂರು ಮಾಡಿಸಲಾಗಿದೆ.
ಕರ್ನಾಟಕ ಸರಕಾರ ನ್ಯಾಯಮೂರ್ತಿ ಶ್ರೀ ನಾಗಮೋಹನ ದಾಸ ವರದಿ ಆಧಾರಿತ ಸರಕಾರದ ನಿರ್ಧಾರವನ್ನು ಮತ್ತೆ ಮರಳಿ ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತ ಇಲಾಖೆಗೆ ಸಲ್ಲಿಸಲು ಮೀನ ಮೇಷ ಮಾಡುತ್ತಿದೆ.
ಶ್ರೀಮಂತರಿಗೆ ಮಠಾಧೀಶರಿಗೆ ರಾಜಕಾರಣಿಗಳಿಗೆ ಶಿಕ್ಷಣ ಸಂಸ್ಥೆಯ ಮಾಲೀಕರಿಗೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದು ಬೇಕಾಗಿಲ್ಲ. ಬಡವರಿಗೆ ಇದರ ಪೂರ್ಣ ವಿವರ ಗೊತ್ತಿಲ್ಲ. ಮಧ್ಯಮ ವರ್ಗದ ಜನರಿಗೆ ಶಕ್ತಿಯಿಲ್ಲ.
ಲಿಂಗಾಯತ ಧರ್ಮದ ಮಾನ್ಯತೆ ಹೋರಾಟಕ್ಕೆ ಬೇಕಾಗಿರುವುದು ಬದ್ಧತೆ ಸೈದ್ಧಾಂತಿಕ ಚಿಂತನೆಗಳ ಸ್ಪಷ್ಟತೆ.
ಕರ್ನಾಟಕದ ಘನ ಸರಕಾರಕ್ಕೆ ಲಿಂಗಾಯತರ ಮತಗಳು ಬೇಕು, ಆದರೆ ನ್ಯಾಯ ಸಮ್ಮತ ಕಾನೂನು ಸಮ್ಮತ ಸಂವಿಧಾನಾತ್ಮಕ ಧರ್ಮ ಮಾನ್ಯತೆ ಬೇಡಿಕೆಗೆ ಕನಿಷ್ಠ ಸ್ಪಂದಿಸುವ ವ್ಯವಧಾನ ಇಲ್ಲ.
ಇಂದು ವೀರಶೈವರು ಸಂಘ ಪರಿವಾರದ ಸದಸ್ಯರು ಹಿಂದೂ ಸಂಘಟನೆಗಳು ಒಂದು ಕಡೆಗೆ ಕೂಡಿ ಒಗ್ಗಟ್ಟಾದರೆ. ಲಿಂಗಾಯತ ಬಸವಣ್ಣ ಎನ್ನುವ ಬಸವ ಸಂಘಟನೆಗಳು ಆಂತರಿಕ ಸಂಘರ್ಷ ಕಿತ್ತಾಟದಿಂದ ವಿಘಟಯಾಗಿವೆ.
ಇಲ್ಲಿ ನಾನು ಯಾರನ್ನೂ ಹೆಸರಿಸದೆ, ದೂಷಿಸದೆ ರಾಜಕೀಯ ಪಕ್ಷದ ನಾಯಕರ ಮತ್ತು ಮಠಗಳ ಕಾವಿಗಳನ್ನು ಹೊರತು ಪಡಿಸಿ ಬಸವ ಭಕ್ತರು ನಮ್ಮ ಧರ್ಮ ತತ್ವ ಸಿದ್ಧಾಂತಗಳನ್ನು ಉಳಿಸಿ ಕೊಳ್ಳಬೇಕು.


