ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾವಸಾರ ಕ್ಷತ್ರೀಯ ಕೊ-ಆಫ್ ಕ್ರೆಡಿಟ್ ಸೊಸಾಯಿಟಿಯ 2026-2031 ನೇ ಸಾಲಿನ 5 ವರ್ಷ ಅವಧಿಗಾಗಿ ಅಧ್ಯಕ್ಷರಾಗಿ ರಾಜೇಶ ದೇವಗಿರಿ ಹಾಗೂ ಉಪಾಧ್ಯಕ್ಷರಾಗಿ ದೀಪಕ ಶಿಂತ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಎ. ಎಸ್. ಕನ್ನೂರ ಅವರು ಘೋಷಿಸಿದ್ದಾರೆ.
ಸೊಸಾಯಿಟಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಅವಿರೋಧ ಆಯ್ಕೆಯಾದ ಆಡಳಿತ ಮಂಡಳಿ ನಿರ್ದೇಶಕರಾದ ನ್ಯಾಯವಾದಿ ಅಶೋಕ ವಾಯ್ ಮಿರಜಕರ, ನ್ಯಾಯವಾದಿ ತುಕಾರಾಮ ಡಿ ಜವಳಕರ, ವಿಜಯಕುಮಾರ ಎಸ್ ನವಲೆ, ಶ್ರೀಕಾಂತ ಎಸ್ ದೇವಗಿರಿ, ವಿಜಯ ಪಿ ಸುಲಾಖೆ, ಶ್ರೀನಿವಾಸ ಎಮ್ ಜವಳಕರ, ಶಶಿಕುಮಾರ ಎ ಚೌಡಿಹಾಳ, ಶ್ರೀಮತಿ ರಾಧಾಬಾಯಿ ಎಮ್ ದೇವಗಿರಿ, ಶ್ರೀಮತಿ ದೀಪಾ ಜಿ ಇಜಂತಕರ, ಕಾರ್ಯದರ್ಶಿಯಾದ ಗಣೇಶ ಎಸ್ ದೇವಗಿರಿ ಉಪಸ್ಥಿತರಿದ್ದರು.

