ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯಗಳು, ಅನುದಾನ ಬಳಕೆ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ದಿಸಲು ಶಾಲಾ ಅಭಿವೃದ್ದಿ ಸಮೀತಿಯ ಪಾತ್ರವೂ ಮಹತ್ವದ್ದಾಗಿದ್ದು. ಕ್ರಿಯಾಶೀಲ ಸಮೀತಿಯಿಂದ ಅಭಿವೃದ್ಧಿ ಸಾಧ್ಯವೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶಾಲಾ ಅಭಿವೃದ್ದಿ ಸಮೀತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರ ಸತ್ಕಾರ ನೆರವೇರಿಸಿ ಮಾತನಾಡಿದ ಅವರು, ಶಾಲೆಯ ಅಗತ್ಯಗಳಿಗೆ ಗ್ರಾಮದ ಪ್ರತಿಯೊಬ್ಬರು ಸ್ಪಂದನೆ ನಿರಂತರವಾಗಿರಲಿದ್ದು ಪಧಾದಿಕಾರಿಗಳು ನಿರಂತರ ಸಂಪರ್ಕದಿಂದ ಶಾಲೆಗೆ ಯಾವುದೇ ಸಮಸ್ಯೆ ಬಾರದಂತೆ ಸ್ಪಂದಿಸಬೇಕೆಂದು ಸಲಹೆ ನೀಡಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ ಕವಟಿ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಮನೋಜ ಹಟ್ಟಿ ಅವ್ವನಪ್ಪ ಮುಗಳಖೋಡ, ಪಿರಸಾಬ ನದಾಫ, ನಾಗಪ್ಪ ಆಲಕನೂರ, ಘಟಿಗೆಪ್ಪ ಜಾಂಗನೂರ, ಶಿವಪ್ಪ ಉರಭಿನವರ, ತುಕಾರಾಮ ದೊಡಮನಿ, ಸಿಆರ್‌ಪಿ ದ್ರಾಕ್ಷಾಯಿಣಿ ಮಂಡಿ, ಮುಖ್ಯಗುರು ಎಸ್.ಎ ಬಿರಾದಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ದಿ ಸಮೀತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯ ಯಂಕಂಚಿ, ಉಪಾಧ್ಯಕ್ಷೆ ಲಕ್ಕವ್ವ ತಿಗಣಿಬಿದರಿ ಹಾಗೂ ಸರ್ವ ಸದಸ್ಯರನ್ನು ಶಾಸಕ ಸಿದ್ದು ಸವದಿ ಸತ್ಕರಿಸಿ ಗೌರವಿಸಿದರು.

