Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಕಾವಲುಗಾರ :ಕೊಣ್ಣೂರ

ತಾಲೂಕು ಆಡಳಿತದ ಭ್ರಷ್ಟಾಚಾರ & ವಿಳಂಬ ನೀತಿ ಖಂಡಿಸಿ ಪ್ರತಿಭಟನೆ

ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸೋಣ :ಮುಲ್ಲಾ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ತಾಲೂಕು ಆಡಳಿತದ ಭ್ರಷ್ಟಾಚಾರ & ವಿಳಂಬ ನೀತಿ ಖಂಡಿಸಿ ಪ್ರತಿಭಟನೆ
(ರಾಜ್ಯ ) ಜಿಲ್ಲೆ

ತಾಲೂಕು ಆಡಳಿತದ ಭ್ರಷ್ಟಾಚಾರ & ವಿಳಂಬ ನೀತಿ ಖಂಡಿಸಿ ಪ್ರತಿಭಟನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎಚ್ ಡಿ ಕೋಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನಾ ಮೆರವಣಿಗೆ

ಉದಯರಶ್ಮಿ ದಿನಪತ್ರಿಕೆ

ಎಚ್ ಡಿ ಕೋಟೆ: ಅವಳಿ ತಾಲೂಕಿನ ರೈತರು ಮಳೆ ಇಲ್ಲದೇ ಕಂಗಾಲಾಗಿದ್ದಾರೆ. ಹೀಗಾಗಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರವನ್ನು ಒಂದು ತಿಂಗಳಲ್ಲೇ ವಿತರಿಸಬೇಕು. ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ 2 ಟಿಎಂಸಿ ನೀರು ಲಿಫ್ಟ್ ಮಾಡಬೇಕೆಂದು ರೈತ ಮುಂಖಡ ಚಾ. ನಂಜುಂಡಮೂರ್ತಿ ಒತ್ತಾಯ ಮಾಡಿದರು.
ತಾಲ್ಲೂಕು ಆಡಳಿತದ ಭ್ರಷ್ಟಾಚಾರ ಹಾಗೂ ವಿಳಂಭನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ವೈನಾಡಲ್ಲಿ ವರುಣ ತೋರಿದೆ ಕೃಪದಿಂದ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಆ ನೀರನ್ನು ತಮಿಳುನಾಡಿಗೆ ಹರಿಯಬಿಡಲಾಗುತ್ತಿದೆ. ಮೊದಲು ತಾರಕ ಜಲಾಶಯ ಹಾಗೂ ಹೆಬ್ಬಾಳ ಜಲಾಶಯಕ್ಕೆ ನೀರು ತುಂಬಿಸಿ, ನಾಲೆಗಳಲ್ಲಿ ನೀರುಹರಿಸಿ ಕೆರೆಕಟ್ಟೆಗಳನ್ನು ಭರ್ತಿ ಮಾಡಬೇಕು. ಈ ಮೂಲಕ ಬತ್ತಿಹೋಗಿರುವ ಬೋರ್ ವೆಲ್ ಗಳಿಗೆ ಮರುಜೀವ ನೀಡಿ, ರೈತನ ಬದುಕನ್ನ ಹಸನಮಾಡಬೇಕು. ಕಾಡುಪ್ರಾಣಿಗಳಿಂದ ಜೀವಕ್ಕೆ ಹಾನಿಯಾದರೆ, ಸುಪ್ರೀಂಕೋರ್ಟ್ ನಿರ್ದೇಶನಂತೆ ಸೂಕ್ತ ಪರಿಹಾರ ಹಾಗೂ ಅವರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಲೋಕೇಶ್ ರಾಜ್ ಅರಸು ಮಾತನಾಡಿ, ರೈತರ ಬದುಕು ಇಂದು ಅತಂತ್ರವಾಗಿದೆ. ದಿನೇ ದಿನೇ ರೈತರ ಸಮಸ್ಯೆಗಳು ಹೆಚ್ಚಾಗುತ್ತಿವೆ, ಸ್ವಾತಂತ್ರ್ಯ ಬರುವ ಮೊದಲು ಈ ದೇಶದಲ್ಲಿ ಬರಗಾಲ ಇತ್ತು, ಆ ಪರಿಸ್ಥಿತಿಯನ್ನು ಎದುರಿಸಲು ವಿದೇಶದಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿಕೊಳ್ಳಲಾಗಿತ್ತು, ಆದರೆ ಇವತ್ತು ದೇಶದ ನೂರ ನಲ್ವತ್ತು ಕೋಟಿ ಜನಕ್ಕೂ ಯಾವುದೇ ಆಹಾರ ಕೊರತೆ ಆಗದಂತೆ ರೈತಾಪಿ ವರ್ಗವು ದುಡಿಯುತ್ತಿದೆ. ರಾಜ್ಯಕ್ಕೆ ಬರಗಾಲ ಬಂದಿದೆ ಈ ಬರಗಾಲವನ್ನ ಎದುರಿಸಲು ಸರ್ಕಾರ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹದೇವನಾಯ್ಕ, ನಂದೀಶ್, ಉಮೇಶ್, ಪ್ರಸಾದ್, ಚಾ.ನಂಜುಂಡಮೂರ್ತಿ, ಲೋಕೇಶ್ ರಾಜೇ ಅರಸ್, ಗೌಡೆಗೌಡ, ವಿಜಯೇಂದ್ರ, ಕೆ.ಸಿ.ಪರಮೇಶ್, ಶಿರಮಳ್ಳಿ ಸಿದ್ದಪ್ಪ, ಸರಗೂರು ನಟರಾಜು, ಮನುಸೋಮಯ್ಯ, ಹೆಜ್ಜಿಗೆ ಪ್ರಕಾಶ್, ಟಿ.ರಾಜು, ಮಹದೇವನಾಯ್ಕ, ನಂದೀಶ್ ಹಿರೇಹಳ್ಳಿ, ಬಿ.ಟಿ.ಉಮೇಶ, ಪಿ.ನಾಗರಾಜು, ಪ್ರಸಾದ್, ಚೌಡನಾಯ್ಕ, ಮಹೇಂದ್ರ, ಸಿ.ವೆಂಕಟಸ್ವಾಮಿ, ರವಿ, ಮುನಿಯಾಂಡಿ, ಬಸವರಾಜು, ಮಂಚನಾಯ್ಕ, ಚೌಡಮ್ಮ, ಚನ್ನನಾಯಕ, ಮಹಾಲಿಂಗು, ರತ್ನಮ್ಮ, ಬಿ.ಕೆ.ಮಹೇಶ್. ಬಸವರಾಜಪ್ಪಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ತಾಲೂಕು ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಪ್ರತಿಯೊಂದಕ್ಕೂ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸಹಯೋಗದಲ್ಲಿ
ಎಚ್ ಡಿ ಕೋಟೆ ತಾಲೋಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸಂಘದ ಸದಸ್ಯರು, ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಗದ್ದಿಗೆ ಸರ್ಕಲ್ ನಿಂದ ಮಿನಿ ವಿಧಾನ ಸೌಧದ ಆವರಣದವರೆಗೂ ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗು ಬೈಕ್ ರ್ಯಾಲಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಕಾವಲುಗಾರ :ಕೊಣ್ಣೂರ

ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸೋಣ :ಮುಲ್ಲಾ

ತಾರಾಪುರದಲ್ಲಿ ನಾಗೇಶಗೆ ಹಾಲು ಎರೆದ ಮಹಿಳೆಯರು

ನೀರು ಕಳ್ಳತನದ 30 ಪ್ರಕರಣ ಭೇದಿಸಿದ ಕೆಬಿಜೆಎನ್ಎಲ್ ಅಧಿಕಾರಿಗಳು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪತ್ರಿಕೋದ್ಯಮ ಪ್ರಜಾಪ್ರಭುತ್ವದ ಕಾವಲುಗಾರ :ಕೊಣ್ಣೂರ
    In (ರಾಜ್ಯ ) ಜಿಲ್ಲೆ
  • ತಾಲೂಕು ಆಡಳಿತದ ಭ್ರಷ್ಟಾಚಾರ & ವಿಳಂಬ ನೀತಿ ಖಂಡಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸೋಣ :ಮುಲ್ಲಾ
    In (ರಾಜ್ಯ ) ಜಿಲ್ಲೆ
  • ತಾರಾಪುರದಲ್ಲಿ ನಾಗೇಶಗೆ ಹಾಲು ಎರೆದ ಮಹಿಳೆಯರು
    In (ರಾಜ್ಯ ) ಜಿಲ್ಲೆ
  • ನೀರು ಕಳ್ಳತನದ 30 ಪ್ರಕರಣ ಭೇದಿಸಿದ ಕೆಬಿಜೆಎನ್ಎಲ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • 2ನೇ ದಿನಕ್ಕೆ ಕಾಲಿಟ್ಟ ಬಿಜೆಪಿಯ ಬೃಹತ್ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ವೈದ್ಯಕೀಯ ಕಾಲೇಜ್ ಕಾಮಗಾರಿ ಆರಂಭಕ್ಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿನಿಯರ ಸಮಗ್ರ ಅಭಿವೃದ್ಧಿಗೆ ಮಹಿಳಾ ವಿವಿ ಆದ್ಯತೆ
    In (ರಾಜ್ಯ ) ಜಿಲ್ಲೆ
  • ತಾವರಖೇಡ ಮುಗಳಖೋಡ ನೂತನ ಬಸ್ ಪ್ರಾರಂಭ
    In (ರಾಜ್ಯ ) ಜಿಲ್ಲೆ
  • ಕ್ರಿಯಾಶೀಲ ಸಮೀತಿಯಿಂದ ಶಾಲೆಯ ಅಭಿವೃದ್ದಿ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.