ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಿನ ಭೀಮ ನದಿಯ ದಂಡಿಯಲ್ಲಿರುವ ಪುಣ್ಯ ಕ್ಷೇತ್ರ ಶ್ರೀ ಪೀರ್ ಗೈಬ ಸಾಹೇಬ ನೆಲೆಸಿರುವ ಪುಣ್ಯ ಕ್ಷೇತ್ರ ತಾವರಖೇಡ ಗ್ರಾಮದಿಂದ ಮುಗಳಖೋಡಕ್ಕೆ ನೂತನ ಬಸ್ಸಿಗೆ ವೇದಮೂರ್ತಿ ಮಾಂತಯ್ಯ ಹಿರೇಮಠ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಭಕ್ತರಿಗೆ ಬಸ್ಸಿನ ಸೌಕರ್ಯ ಕಲ್ಪಿಸಿಕೊಟ್ಟ ಸಿಂದಗಿ ಮತ ಕ್ಷೇತ್ರದ ಶಾಸಕರಾದ ಆಶೋಕ ಮನಗೂಳಿ ಇವರಿಗೆ ತಾವರಖೇಡ ಕಡಣಿ ಗ್ರಾಮಸ್ಥರು ಅಭಿನಂದಿಸಿದರು.
ಸಿದ್ದು ಆಫಜಲಪುರ, ಶಿವಾನಂದ ಬಗಲಿ, ಶರಣಪ್ಪ ನಾಟಿಕಾರ್, ಸುರೇಶ್ ಪೂಜಾರಿ, ಮಲ್ಲು ಬೋಗೂಂಡಿ, ಅಣ್ಣಾರಾಯ ಬಗಲಿ, ರಾಜಶೇಖರ ಪಾಟೀಲ, ರಮೇಶ್ ಅಫಜಲಪುರ, ಈರಣ್ಣ ಬಿರಾದಾರ, ಹನುಮಂತ್ರಾರಾಯ ಬಗಲಿ, ಯಲ್ಲಾಲಿಂಗ ಬಿರಾದಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

