ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಸಮೀಪದ ತಾರಾಪುರ ಗ್ರಾಮದಲ್ಲಿ ನಾಗರ ಪಂಚಮಿ ನಿಮಿತ್ಯವಾಗಿ. ಶ್ರಾವಣ ಮಾಸದ ಆಗಮನ ದೊಂದಿಗೆ ನಾಡ ನಾಡಿನಾದ್ಯಂತ ಹಬ್ಬಗಳ ಸುಗ್ಗಿ ಆರಂಭವಾಗಿದ್ದು ಈ ಮಾಸದ ಮೊದಲ ಪ್ರಮುಖ ಹಬ್ಬವಾದ ನಾಗರ ಪಂಚಮಿಗೆ ರಾಜ್ಯದಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಶ್ರಾವಣ ಶ ಶುಕ್ಲ ಪಕ್ಷದ ಪಂಚಮಿ ಎಂದು ಆಚರಿಸಲಾಗುವುದು ಈ ಪವಿತ್ರ ಪರ್ವ ವು ಮನಸ್ಸು ಮತ್ತು ಪ್ರಕೃತಿ ಹಾಗೂ ಜೀವ ರಾಶಿಗಳ ನಡುವಿನ ಆವಿನಾಭಾವ ಸಂಬಂಧವನ್ನು ಸಾರುತ್ತದೆ. ಸಂಪ್ರದಾಯ ಮತ್ತು ಧಾರ್ಮಿಕ ಹಿನ್ನೆಲೆ ಕೃಷಿ ಸಂಸ್ಕೃತಿಯಲ್ಲಿ ರೈತನ ಮಿತ್ರ ಎಂದೇ ಪರಿಗಣಿತವಾಗಿರುವ ನಾಗ ದೇವರಿಗೆ ಪೂಜೆ ಸಲ್ಲಿಸುವುದು ಈ ಹಬ್ಬ ದ ಮುಖ್ಯ ವಿಶೇಷ ಏನೆಂದರೆ ದೇವಸ್ಥಾನಗಳಲ್ಲಿನ ನಾಗರಕಲ್ಲು ಹಾಗೂ ಹುತ್ತಗಳಿಗೆ ಹಾಲು. ಆರಿಶಿನ. ಕುಂಕುಮ. ಹೂವು. ಮತ್ತು ಗೆಜ್ಜೆಯ ವಸ್ತ್ರವುನ್ನು ಅರ್ಪಿಸಿ ನಾಗದೋಷ ಶಮನ ಹಾಗೂ ಕುಟುಂಬದ ಕ್ಷೇಮ ಅಭಿವೃದ್ದಿಗಾಗಿ ಮಹಿಳೆಯರು ಭಕ್ತಿಯಿಂದ ಬೇಡಿಕೊಂಡರು

