ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ ನೇಯ ಶತಮಾನದ ಬಸವಾದಿ ಶರಣರು ಸಮಾಜದಲ್ಲಿನ ಸಮಾನತೆ, ಜಾತಿ-ಜನಾಂಗದ ಭೇದ, ಸಾಮಾಜಿಕ ಅನಿಷ್ಟ, ಮೌಢ್ಯತೆಗಳನ್ನು ಹೋಗಲಾಡಿಸಿ, ಸಮ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಪಂಡಿತ ಮಧುಸೂದನ ಆಚಾರ್ಯ ಕಟ್ಟಿ ಅವರು ಹೇಳಿದರು.
ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಆಂಜನೇಯ ದೇವಸ್ಥಾನದ ೬ ನೇಯ ವರ್ಷದ ಜಾತ್ರಾ ಮಹೋತ್ಸವದ ಸಮಾರೋಪ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಾನಿಧ್ವ ವಹಿಸಿದ್ದ ಜಮಖಂಡಿ ಓಲೇಮಠದ ಆನಂದ ದೇವರು ತಮ್ಮ ಮಾತನಾಡಿ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಏಕೋಭಾವದಿಂದ ಪಾಲ್ಗೊಂಡು ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚರಣೆ, ಸಂಪ್ರದಾಯ ಮತ್ತು ಪರಂಪರೆಯನ್ನು ಎತ್ತಿ ಹಿಡಿದರೆ, ಸಮಾಜದಲ್ಲಿ ಸಾಮರಸ್ಯತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದಲ್ಲಿ ದೇವಾಲಯದ ಅಧ್ಯಕ್ಷ ಸಂತೋಷ ಪಾಟೀಲ, ಲಕ್ಷಣ ಶಿಂಧೆ, ಬಲವಂತ ಬಳೂಲಗಿಡದ, ಸಿದ್ದಾರೂಢ ಹಿರೇಮಠ, ನಾಗೇಂದ್ರ ಯಾದವ, ಸಂಗಣ್ಣ ತೆನಿಹಳ್ಳಿ, ರೇವತಿ ಬುದ್ನಿಮಠ, ಇನ್ನಿತರರು ವೇದಿಕೆಯ ಮೇಲಿದ್ದರು,
ನಂತರ ಮಕ್ಕಳು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕ ಮತ್ತು ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮೌನೇಶ ಬಡಿಗೇರ, ಭೀಮಾಶಂಕರ ಮುಳವಾಡ, ಡಾ.ಸಂಗಮೇಶ ವಾಣಿ, ವೀರೂಪಾಕ್ಷಯ್ಯ ಮಠಪತಿ ಮತ್ತು ದೀಪಾ ಮಠಪತಿ ಇವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಕಾಶ ಗೋಂಧಳಿ ಭಕ್ತಿಗೀತೆ ಪ್ರಚುರಪಡಿಸಿದರು. ಪ್ರೊ. ಎಂ.ಎಸ್.ಖೊದ್ನಾಪೂರ ಕಾರ್ಯಕ್ರಮ ನಿರೂಪಿಸಿದರು. ಆರ್.ಬಿ.ಕುಮಟಗಿ ಪಾರಿತೋಷಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಲ್ಲನಗೌಡ ಪಾಟೀಲ, ವೆಂಕಟೇಶ ಹೊಸಮನಿ, ರಮೇಶ ಕೋಷ್ಟಿ, ಗಂಗಾಧರ ಚಾಬೂಕಸವಾರ, ಬಾಬು ಕೋಲಕಾರ, ಭೀಮರಾಯ ಬಿರಾದಾರ, ಶಿವಪ್ಪ ಸಾವಳಗಿ, ಅನೀಲ ಪಾಟೀಲ, ಮಹಾದೇವ ಪಾಟೀಲ, ಎಸ್.ಜಿ.ನಿಂಗನಗೌಡ್ರ, ಅಮ್ಮಣ್ಣ ದಂಧರಗಿ, ಸುರೇಶ ಹಲಕುಡಿ, ಮಹಾಂತೇಶ್ವರಿ ಪಾಟೀಲ, ಮಂಜುಳಾ ಕವಲಗಿ, ಗೀತಾ ಎಚ್ಚಿ, ನಿಖಿತಾ ಬಳೂಲಗಿಡದ, ಲಕ್ಷ್ಮಿ ಪೂಜಾರಿ, ಆರ್.ಬಿ.ಪೂಜಾರಿ, ಇನ್ನಿತರರು ಭಾಗವಹಿಸಿದ್ದರು.

