ಉದಯರಶ್ಮಿ ದಿನಪತ್ರಿಕೆ
ಗದಗ: ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ, ಕಲಾ ವಿಕಾಸ ಪರಿಷತ್ ನಿಂದ, ದಿನಾಂಕ ೦೨ ಫೆಬ್ರುವರಿ ೨೦೨೬. ಸೋಮವಾರ ಇಳಿಹೊತ್ತು ೩ ಗಂಟೆಗೆ ನಗರದ ಮುಂಡರಗಿ ರಸ್ತೆಯಲ್ಲಿ ಇರುವ, ಚಿಕ್ಕಟ್ಟಿ ಸಭಾ ಭವನದಲ್ಲಿ, ಗದಗು ಸಂಗೀತದ ಗದ್ದುಗೆ ಮಾಡಿದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ೧೩೪ ನೆಯ ಜಯಂತಿಯನ್ನು, ಅಮರ ಸ್ವರ ಸಮಾರೋಹವನ್ನಾಗಿ ಆಚರಿಸಲಾಗುತ್ತಿದೆ.
ಈ ಸಮಾರಂಭದ ಉದ್ಘಾಟನೆಯನ್ನು ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್. ವಾಯ್. ಚಿಕ್ಕಟ್ಟಿ ಇವರು ನಡೆಸಿಕೊಡುವರು. ಅಧ್ಯಕ್ಷತೆಯನ್ನು ಕಲಾ ವಿಕಾಸ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ರವಿ ಎಲ್. ಗುಂಜೀಕರ್ ಇವರು ವಹಿಸಿಕೊಳ್ಳುವರು. ಕಲಾ ವಿಕಾಸ ಪರಿಷತ್ ಅಧ್ಯಕ್ಷರಾದ ಶ್ರೀ ಸಿ. ಕೆ. ಹೆಚ್. ಶಾಸ್ತ್ರೀ (ಕಡಣಿ) ಇವರು ನುಡಿನಮನ ಸಲ್ಲಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರಿನ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಬಳ್ಳಾರಿಯವರನ್ನು ಮತ್ತು ಎಲ್.ಎಲ್.ಎಮ್. ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ ಪಡೆದುಕೊಂಡ, ಬೆಂಗಳೂರಿನ ಕೆ.ಎಲ್.ಇ. ಕಾನೂನು ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ, ಗದುಗಿನ ಪ್ರತಿಭೆ, ಸಹನಾ ಅನಂತ ಕಾರ್ಕಳ ಇವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ನಂತರ ವೀರೇಶ್ವರ ಪುಣ್ಯಾಶ್ರಮದ ಕುಮಾರ ಹಿರೇಮಠ ಗುತ್ತರಗಿ, ಧಾರವಾಡದ ಆಕಾಶವಾಣಿ ದೂರದರ್ಶನ ಕಲಾವಿದೆ, ಡಾ. ಸುಮಾ ಬಸವರಾಜ, ಹಳಿಯಾಳ, ಕಲಾ ವಿಕಾಸ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಾವೇರಿಯ ಶ್ರೀಮತಿ ಮಮತಾ ಮಾಗಳ ಇವರಿಂದ ಸುಗಮ ಮತ್ತು ವಚನ ಸಂಗೀತ ಎರ್ಪಡಿಸಲಾಗಿದೆ. ಇವರಿಗೆ, ವೀರೇಶ್ವರ ಪುಣ್ಯಾಶ್ರಮದ ಶ್ರೀಕಾಂತ ಗಂಗಾವತಿ ಇವರು ತಬಲಾ ಸಾಥ ನೀಡಲಿದ್ದಾರೆ. ಮತ್ತು ಗದುಗಿನ ಉದಯೋನ್ಮುಖ ಕಲಾವಿದೆ, ತನಿಷಾ ಸತೀಶಕುಮಾರ ವಜ್ರೇಶ್ವರಿ ಇವರಿಂದ ಭರತನಾಟ್ಯವಿರುತ್ತದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಕಲಾ ವಿಕಾಸ ಪರಿಷತ್ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದೆ.

