ಆಲಮೇಲದಲ್ಲಿ ನಡೆದ ವಿರಾಟ ಹಿಂದೂ ಸಮ್ಮೇಳನ ಸಮಾವೇಶದಲ್ಲಿ ರಾಮಚಂದ್ರ ಏಡಕೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಹಿಂದೂಸ್ಥಾನದಲ್ಲಿ ಬಿರುವರೆಲ್ಲರೂ ಹಿಂದೂಗಳೆ. ಈ ಹಿಂದೂ ಧರ್ಮ ನಾಶ ಮಾಡಲು ಸಾವಿರಾರು ವರ್ಷಗಳಿಂದ ನಿರಂತರವಾಗಿ ಪ್ರಯತ್ನಗಳು ಮಾಡಲಾಗಿದೆ ಆದರೂ ಹಿಂದೂ ಧರ್ಮ ನಾಶ ಮಾಡಲು ಆಗಿಲ್ಲ ಮುಂದೆಯು ಆಗೋದಿಲ್ಲ ಎಂದು ಉತ್ತರ ಕರ್ನಾಟಕ ಪ್ರಾಂತ ಸಹ ಬೌಧಿಕ ಪ್ರಮುಖ ರಾಮಚಂದ್ರ ಏಡಕೆ ಹೆಳಿದರು.
ಪಟ್ಟಣದ ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ ಹೆಳಿದರು.
ಹಿಂದೂ ಧರ್ಮ ನಾಶ ಮಾಡಲು ಹಿಂದೂಗಳ ಮೇಲೆ ನಡೆದಿರುವ ಅಕ್ರಮಗಳು ಹಿಂದೂ ಧರ್ಮದ ಇತಿಹಾಸ ತಿಳಿದುಕೊಳ್ಳಬೇಕು ಎಂದರು.
ಹಿಂದೂ ಸಮಾಜಕ್ಕೆ ಸ್ವಾರ್ಥ ದೊಡ್ಡ ರೋಗವಾಗಿದೆ ತಮ್ಮ ಸ್ವಾರ್ಥಕ್ಕಾಗಿ ದೇಶ ಮತ್ತು ಧರ್ಮದ ಒಳಿತನ್ನೆ ಮರೆತು ಸ್ವಾರ್ಥಿಗಳಾಗುತ್ತಿದ್ದಾರೆ. ಭಾರತಿಯರು ಹಾವಾಡಿಗರು ಎಂದು ಅಗೌರವನ್ನು ಕಾಣುವದನ್ನು ದೂರ ಮಾಡಿದ್ದು ಸ್ವಾಮಿ ವಿವೇಕಾನಂದರು. ಅವರ ಜ್ಞಾನದಿಂದ ಜಗತ್ತಿಗೆ ಭಾರತಿಯರ ಸಂಸ್ಕಾರ ಜ್ಞಾನ ತೋರಿಸಿಕೊಟ್ಟಿದೆ ಎಂದರು.
ತಾರಾಪೂರ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಗುರು ಸಂಸ್ಥಾನ ಹಿರೇಮಠ ಚಂದ್ರಶೇಖರ ಶಿವಾಚಾರ್ಯರು, ಸಂಗನಬಸವ ಶಿವಾಚಾರ್ಯರು, ಅಳ್ಳೊಳ್ಳಿಮಠದ ಶ್ರೀಶೈಲಯ್ಯ, ಕುಮಸಗಿ ಕಲ್ಲಾಲಿಂಗ ಸ್ವಾಮಿ, ಬ್ರಹ್ಮಕುಮಾರಿ ರೇಣಿಕಾ ಅಕ್ಕ, ಡಾ. ಸಂದೀಪ ಪಾಟೀಲ, ಬಸವಲಿಂಗ ಶರಣರು, ಮಹಿಳಾ ಪ್ರತಿನಿಧಿ ಪ.ಪಂ. ಮಾಜಿ ಅದ್ಯಕ್ಷೆ ವಿದ್ಯಾವತಿ ಗೌರ ಉಪಸ್ಥಿತರಿದ್ದರು.
ವಿರಾಟ ಹಿಂದೂ ಸಮ್ಮೇಳನ ಸಂಚಾಲನ ಸಮಿತ ಅದ್ಯಕ್ಷ ಜಿ.ಸಿ. ಪಶುಪತಿಮಠ ಅದ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಮೇಶ ಭೂಸನೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಜಿಲ್ಲಾ ಬಿಜೆಪಿ ಯುವಮೋರ್ಚ ಅಧ್ಯಕ್ಷ ಬಸವರಾಜ ಹೂಗಾರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀಶೈಲ ಕಲ್ಲೂರ ಸ್ವಾಗತಿಸಿದರು. ರಾಕೇಶ ರಾಂಪೂರಮಠ ನಿರೂಪಿಸಿದರು. ಶಿವಾನಂದ ಮಾರ್ಸನಳ್ಳಿ ವಂದಿಸಿದರು.

