ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶ್ರೀ ಸದ್ಗುರು ಪತ್ತಿನ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನೂತನವಾಗಿ ಬೆಳಗಾವಿಯ ಸಹಕಾರಿ ಸಂಘದ ಜಂಟಿ ನಿಬಂಧಕರಾಗಿ ಪದನ್ನೋತಿ ಹೊಂದಿದ ಕಲ್ಲಪ್ಪ ಓಬಣ್ಣಗೋಳ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಶ್ರೀ ಸದ್ಗುರು ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಸಬರದ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ ಅಗಸಬಾಳ, ಆನಂದ ಶಾಬಾದಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಮಲ್ಲು ಹಡಪದ, ಅಬ್ದುಲಗಪುರ ಭಾಗವಾನ, ಪಂಡಿತ ಯಂಪುರೆ, ಶಿವಾನಂದ ಬಡಾನೂರ, ಮಹಾಂತೇಶ ನೂಲಾನವರ ಸೇರಿದಂತೆ ಅನೇಕರು ಇದ್ದರು.

