ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಒಂದು ಸಂಸ್ಥೆ ಸ್ಥಾಪನೆಯಾದ ದಿನವನ್ನು ಸಂಸ್ದಾಪನಾ ದಿನವನ್ನಾಗಿ ಆಚರಿಸುವ ಮೂಲಕ ಸಂಸ್ಥೆಯ ಸಾಧನೆಗಳನ್ನು ಮೆಲುಕು ಹಾಕುತ್ತಾ ಭವಿಷ್ಯದ ಗುರಿಗಳನ್ನು ನಿಗದಿಪಡಿಸುವ ವಿಶೇಷ ದಿನವಾಗಿದೆ ಎಂದು ಸಹಕಾರಿ ನಿರ್ದೇಶಕ ವೈ ಟಿ ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೆಂಭಾವಿ ಕಾರ್ಯಕ್ರಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 18 ನೇ ವರ್ಷದ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಾಮಾನ್ಯವಾಗಿ, ಈ ದಿನದಂದು ಸಂಸ್ಥೆಯು ಕಳೆದ ವರ್ಷದ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಮುಂದಿನ ಬೆಳವಣಿಗೆಯ ಯೋಜನೆಗಳನ್ನು ರೂಪಿಸುತ್ತಾ ಶೇರುದಾರರ ಹಾಗೂ ಸಿಬ್ಬಂದಿ ಮತ್ತು ಗ್ರಾಹಕರಲ್ಲಿ ಒಗ್ಗಟ್ಟು, ಕೃತಜ್ಞತೆ ಮತ್ತು ಪ್ರೇರಣೆಯನ್ನು ಮೂಡಿಸುತ್ತದೆ ಎಂದರು.
ಸಹಕಾರಿಯ ಅಧ್ಯಕ್ಷ ಶಾಂತಗೌಡ ಎಂ ಬಿರಾದಾರ, ಉಪಾಧ್ಯಕ್ಷ ಶರಣಬಸವ ಡಿಗ್ಗಾವಿ, ನಿರ್ದೇಶಕರಾದ, ಸಂಗನಗೌಡ ಮರಡ್ಡಿ, ರಾಮನಗೌಡ ವಂದಗನೂರ ಯಾಳಗಿ, ಎಸ್ ವೈ ಕರಡಕಲ್, ಮಲ್ಲನಗೌಡ ಪೋಲೀಸ್ ಪಾಟೀಲ, ಅಯ್ಯನಗೌಡ ಲಕ್ಕುಂಡಿ, ಮಲ್ಲರಡ್ಡಿ ಮಲ್ಲಾಬಾದಿ, ಸಿದ್ದನಗೌಡ ಶಿವಪುರ, ರವೀಂದ್ರ ಧರಿ, ಡಾ ಪ್ರವೀಣ್ ಪಾಟೀಲ, ಕನಕಪ್ಪ, ವಂದಗನೂರ, ನೀಲಮ್ಮ ಆರ್ ಪಾಟೀಲ್, ಅಕ್ಮಮಹಾದೇವಿ ಆರ್ ಮರಡ್ಡಿ, ವಂಕೋಬನಾಯಕ ಜಾಗಿರದಾರ ಮುಖ್ಯ ಕಾರ್ಯನಿರ್ವಾಹಕ ಸುರೇಶ ಯಾಳಗಿ ಸಿಬ್ಬಂದಿಗಳಾದ ಶಿವರೆಡ್ಡಿ, ಶಾಮಸುಂದರ, ಚಂದುಸಿಂಗ್, ಶಿವು, ಶೇಖು, ಸೇರಿದಂತೆ ಶೇರುದಾರರ, ಗ್ರಾಹಕರು, ಉಪಸ್ಥಿತರಿದ್ದರು.

