ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭೂಮಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ವಿಜಯಪುರ ಜಿಲ್ಲೆಯು ತೃತೀಯ ಸ್ಥಾನ ಪಡೆದಿರುವುದಕ್ಕೆ ಕಂದಾಯ ಇಲಾಖೆ ಭೂಮಿ ಉಸ್ತುವಾರಿ ಕೋಶದಿಂದ ಅಭಿನಂದನಾ ಪತ್ರ ನೀಡಲಾಗಿದೆ.
ಡಿಸೆಂಬರ್–೨೦೨೫ ಮಾಹೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದ ಒಟ್ಟು ೧೪,೦೬೦ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ಶೀಘ್ರವಾಗಿ ವಿಲೇವಾರಿ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದೆ.
ಡಿಸೆAಬರ್–೨೦೨೫ ಮಾಹೆಯಲ್ಲಿ ಜಿಲ್ಲೆ ೫.೫೨ ಸಿಗ್ಮಾ ಮೌಲ್ಯವನ್ನು ಸಾಧಿಸಿದ್ದು, ಇದರ ಫಲವಾಗಿ ವಿಲೇವಾರಿ ಸೂಚ್ಯಾಂಕ (ಆisಠಿosಚಿಟ Iಟಿಜex) ೪.೫೮೭೬೬ ದಾಖಲಾಗಿದೆ. ಈ ಸಾಧನೆ ಜಿಲ್ಲೆಯಲ್ಲಿ ಭೂಮಿ ಯೋಜನೆಯ ಅನುಷ್ಠಾನವು ಪರಿಣಾಮಕಾರಿಯಾಗಿ ನಡೆಯುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಈ ಮಹತ್ವದ ಕಾರ್ಯಸಾಧನೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ಸಂಬಂಧಿತ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮರ್ಪಿತ ಸಹಕಾರ, ಕಾರ್ಯತತ್ಪರತೆ ಮತ್ತು ಹೊಣೆಗಾರಿಕೆ ಪ್ರಮುಖ ಕಾರಣವಾಗಿದೆ ಎಂದು ಭೂಮಿ ಉಸ್ತುವಾರಿ ಕೋಶ ತಿಳಿಸಿದೆ.
ಜಿಲ್ಲೆಯ ಈ ಸಾಧನೆಗೆ ಭೂಮಿ ಉಸ್ತುವಾರಿ ಕೋಶದ ಪರವಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಅವರ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು–ಸಿಬ್ಬಂದಿಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯ ಸಹಕಾರ, ವೇಗದ ಕಾರ್ಯನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಯ ಬದ್ಧತೆಯನ್ನು ಮುಂದುವರಿಯುವಂತೆ ಆಶಿಸಲಾಗಿದೆ.
