ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ಕಶವಾದ ಶಬ್ದವನ್ನು ಉಂಟು ಮಾಡುವ ಜೊತೆಗೆ ಶಬ್ದ ಮಾಲಿನ್ಯ ಹರಡಿ ಸಾರ್ವಜನಿಕವಾಗಿ ತುಂಬಾ ತೊಂದರೆ ಉಂಟುಮಾಡುವ ಬೈಕ್ ಗಳನ್ನು
ಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ವಶಪಡಿಸಿಕೊಂಡು ಬೈಕ್ ಸೈಲೆನ್ಸರ ಕಿತ್ತುಹಾಕಿ ಬೈಕ್ ಸವಾರರಿಗೆ ಸೂಕ್ತ ಎಚ್ಚರಿಕೆ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಯಿತು.
ಪಟ್ಟಣದಲ್ಲಿ ಕರ್ಕಶ ಶಬ್ದದಿಂದ ಶಬ್ದ ಮಾಲಿನ್ಯ, ಸೈಲೆನ್ಸರ್ ದಿಂದ ಹೆಚ್ಚು ಹೊಗೆಯಿಂದಾಗಿ ವಾಯುಮಾಲಿನ್ಯ ಉಂಟಾಗುತ್ತಿರುವದನ್ನು ಗಮನಿಸಿದ ಪೊಲೀಸ್ ಇಲಾಖೆಯು ಇಂತಹ ಕಾರ್ಯಾಚರಣೆ ಕೈಗೊಂಡಿರುವದಕ್ಕೆ ಪ್ರಜ್ಞಾವಂತರಿಂದ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಜಗದೀಶ ತಕ್ಕೋಡ, ಮಹಾಂತೇಶ ಸಜ್ಜನ ಇತರರು ಇದ್ದರು.

