ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಜನ್ಮ ದಿನದ ಅಂಗವಾಗಿ ಶನಿವಾರ ನಗರದ ಆರಾಧ್ಯದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಎಂಜನಿಯರಿಂಗ್ ವ್ಯಾಸಂಗ ಮಾಡುತ್ತಿರುವ ತಂದೆ ಇಲ್ಲದ ಬಡ ಯುವಕ ಗಿರೀಶ್ ಗೌಡರ ಎಂಬಾತನ ಕಾಲೇಜು ಬ್ಯಾಂಕ್ ಖಾತೆಗೆ ಮಹಾನಗರ ಪಾಲಿಕೆ ವಾರ್ಡ್ ನಂ.22 ಸದಸ್ಯರಾದ ಪ್ರೇಮಾನಂದ ಬಿರಾದಾರ ಅವರು ವೈಯಕ್ತಿಕವಾಗಿ ರೂ.50 ಸಾವಿರ ಸಂದಾಯ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡಿ ಬಡ ವಿದ್ಯಾರ್ಥಿ ವ್ಯಾಸಂಗಕ್ಕೆ ನೆರವಾಗಿದ್ದಾರೆ.
ಸಿದ್ದೇಶ್ವರ ದೇವಸ್ಥಾನದ ಪೂಜೆಯಲ್ಲಿ ಮಹಾನಗರ ಪಾಲಿಕೆ ಮೇಯರ್ ಶ್ರೀ ಎಂ.ಎಸ್.ಕರಡಿ, ಮುಖಂಡರಾದ ಚಂದ್ರು ಚೌದರಿ, ಬಸವರಾಜ ಬಿರಾದಾರ, ಶ್ರೀಶೈಲ ಕಣಮುಚನಾಳ, ಪ್ರಶಾಂತಗೌಡ ಬಿರಾದಾರ, ರಾಜಕುಮಾರ ಬಿರಾದಾರ ಮತ್ತಿತರರು ಇದ್ದರು.

