ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ಮಹಾಶಿವಶರಣೆ ಅಕ್ಕಮಹಾದೇವಿ ಪ್ರತಿಮೆ ಪ್ರಾಣ ಪ್ರತಿಷ್ಠಾಪನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಭಕ್ತಿಭಾವದೊಂದಿಗೆ ವಿಜೃಂಭಣೆಯಿಂದ ಜರುಗಿತು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಮಲ್ಲಯ್ಯನ ದೇವಸ್ಥಾನದಲ್ಲಿ ಶುಕ್ರವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಕ್ಕಳು ಬಸವಣ್ಣ ಅಕ್ಕಮಹಾದೇವಿ, ಹಾಗೂ ಶ್ರೀಶೈಲ ಮಲ್ಲಿಕಾರ್ಜುನರ ವೇಷಭೂಷಣ ಧರಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಜೊತೆಗೆ ಅಕ್ಕಮಹಾದೇವಿಯವರ ವಚನ, ಹಾಡುಗಳಿಂದ ಕೂಡಿದ ಮಕ್ಕಳ ಕೋಲಾಟ ಎಲ್ಲರ ಗಮನ ಸೆಳೆಯಿತು.
ಗ್ರಾಮದ ನೂರಾರು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಆರತಿ ಸಮೇತವಾಗಿ ಪಾಲ್ಗೊಂಡು ಭಕ್ತಿ ಭಾವ ತೋರಿದರು.
ಗ್ರಾಮದ ಭಜನಾಮೇಳ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತಂದಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯವರ ಚರಿತ್ರೆಯ ಕುರಿತು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಹಣಮಂತ್ರಾಯ ಹಿರೂರ ಮಾತನಾಡಿದರು.
ಅಂದಾನಯ್ಯ ಹಿರೇಮಠ, ಶರಣಗೌಡ ಪಾಟೀಲ, ಮಲಕು ಸುರಗಿಹಳ್ಳಿ, ಶಿವಾನಂದ ಹೊನ್ನಳ್ಳಿ, ಮಲ್ಲನಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಭೀಮರಾಯ ಪೊಲೇಶಿ, ಸಿದ್ದು ಹದರಿ, ಭಾಗೀರಥಿ ನಾಗರಳ್ಳಿ, ಶಾಂತಾಬಾಯಿ ಗಬ್ಬೂರ, ಭಾರತಿ ಗಬ್ಬೂರ, ಸರೂಬಾಯಿ ಉಕುಮನಾಳ, ದಾನಮ್ಮನಾಗರಳ್ಳಿ, ಭಾಗೀರಥಿ ಆಲಗೂರ ಸೇರಿದಂತೆ ಗ್ರಾಮಸ್ಥರು ಇದ್ದರು.

