ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಜೀರಂಕಲಗಿ ಗ್ರಾಮದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಆಗಸ್ಟ್ ೧೦, ೧೧, ೧೨ರಂದು ಗುರು ಶ್ರೀ ರಾಘವೇಂದ್ರ ಸ್ವಾಮಿಗಳವರ ೩೫೪ನೇ ಆರಾಧನಾ ಮಹೋತ್ಸವ ಏರ್ಪಡಿಸಲಾಗಿದೆ.
ಮಹೋತ್ಸವದ ಅಂಗವಾಗಿ ಆ.೧೦ರಂದು ಪೂರ್ವಾರಾಧನೆ ಅಂಗವಾಗಿ ಬೆಳಗ್ಗೆ ೭ಗಂಟೆಗೆ ಗೋಪೂಜಾ, ಧ್ವಜಾರೋಹಣ, ೮ ಗಂಟೆಗೆ ಪಂ. ಸಮೀರಾಚಾರ್ಯ ಇವರಿಂದ ಪವಮಾನ ಹೋಮ, ೧೦ ಗಂಟೆಗೆ ಕಲಶ ಸ್ಥಾಪನೆ, ಶ್ರೀ ಹರಿವಾಯು ಸ್ತುತಿ, ಅಷ್ಟೋತ್ತರ, ಕ್ಷೀರಾಭಿಷೇಕ ಪಂಚಾಮೃತ, ಅಲಂಕಾರ, ೧೨ ಗಂಟೆಗೆ ಪೂಜಾ, ನೈವೇದ್ಯ, ಹಸ್ತೋದಕ, ಸಾಯಂಕಾಲ ೭ ಗಂಟೆಗೆ ವಿಜಯಪುರದ ಸರ್ವಜ್ಞ ವಿಹಾರ ವಿದ್ಯಾಪೀಠದ ಪಂಡಿತ ಸಮೀರಾಚಾರ್ಯ ಕುಲಕರ್ಣಿ ಇವರಿಂದ ನವಮ ಸ್ಕಂದ ಭಾಗವತ ಪುರಾಣ, ಶ್ರೀ ವೇದೇಶತೀರ್ಥ ವಿದ್ಯಾಪೀಠ ಮಣೂರದ ಪಂಡಿತ ಸತ್ಯವರಾಚಾರ್ಯ ಇವರಿಂದ ಪ್ರವಚನ, ರಾತ್ರಿ ೮ ಗಂಟೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ತಾರತಮ್ಯೋಕ್ತ ಭಜನೆ.
೧೧ರಂದು ಮಧ್ಯಾರಾಧನೆ ಪ್ರಯುಕ್ತ ಬೆಳಗ್ಗೆ ೭ ಗಂಟೆಗೆ ಪಂಚಾಮೃತ, ಅಷ್ಟೋತ್ತರ, ಅಲಂಕಾರ, ೧೦ ಗಂಟೆಗೆ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿಜಯಪುರ ಶಾಖಾಧಿಕಾರಿ ಸತೀಶ ಜೋಶಿ ಇವರ ನೇತೃತ್ವದಲ್ಲಿ ರಥೋತ್ಸವ, ೧೨ ಗಂಟೆಗೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಮಹಾಪ್ರಸಾದ, ಸಾಯಂಕಾಲ ೭ ಗಂಟೆಗೆ ವಿಜಯಪುರದ ಪಾವನಿ, ಸಮೃದ್ಧಿ, ಸಮೀತಾ ಜೋಷಿ ಇವರಿಂದ ಭರತನಾಟ್ಯ ಕಾರ್ಯಕ್ರಮ, ರಾತ್ರಿ ೯ ಗಂಟೆಗೆ ಪ್ರವಚನ, ಶ್ರೀ ವೇದೇಶತೀರ್ಥ ವಿದ್ಯಾಪೀಠ ಮಣೂರದ ವಿದ್ಯಾರ್ಥಿಗಳಿಂದ ಧಾರ್ಮಿಕ ಪ್ರವಚನ, ೧೦ ಗಂಟೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ತಾರತಮ್ಯೋಕ್ತ ಭಜನೆ.
೧೨ ರಂದು ಉತ್ತರಾರಾಧನೆ ಪ್ರಯುಕ್ತ ೭ ಗಂಟೆಗೆ ಪಂಚಾಮೃತ, ಅಷ್ಟೋತ್ತರ, ಅಲಂಕಾರ, ೧೦ ಗಂಟೆಗೆ ಶಿವಣಗಿ ಗ್ರಾಮದ ರಾಘವೇಂದ್ರ ಕುಲಕರ್ಣಿಇವರ ನೇತೃತ್ವದಲ್ಲಿ ಪಲ್ಲಕ್ಕಿ ಸೇವೆಯೊಂದಿಗೆ ಗ್ರಾಮ ಪ್ರದಕ್ಷಿಣೆ, ೧೨ ಗಂಟೆಗೆ ಗಂಟೆಗೆ ನೈವೇದ್ಯ, ಹಸ್ತೋದಕ, ಮಹಾಮಂಗಳಾರತಿ, ಸಾಯಂಕಾಲ ೬ ಗಂಟೆಗೆ ಚಿಕ್ಕ ಮಕ್ಕಳ ಕಾರ್ಯಕ್ರಮ , ರಾತ್ರಿ ೮ ಗಂಟೆಗೆ ಸರ್ವಜ್ಞ ವಿಹಾರ ವಿದ್ಯಾಪೀಠ ವಿಜಯಪುರದ ಪಂಡಿತ ಕೇಶವಾಚಾರ್ಯ ಕುಲಕರ್ಣಿ, ಪಂಡಿತ ಸಮೀರಾಚಾರ್ಯ ಕುಲಕರ್ಣಿ ಇವರಿಂದ ಪ್ರವಚನ, ೯ ಗಂಟೆಗೆ ಆಭಾರ ಮನ್ನಣೆ, ಮಂಗಳಾರತಿಯೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವ ಮುಕ್ತಾಗೊಳ್ಳಲಿದೆ ಎಂದು ಗೋಪಾಲ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
