ಉದಯರಶ್ಮಿ ದಿನಪತ್ರಿಕೆ
ಚಡಚಣ: ಶಾಲಾ ಮಕ್ಕಳಲ್ಲಿ ಚುನಾವಣೆ ಮತ್ತು ಸಂಸತ್ತು ರಚನೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮೀಪದ ಬರಡೋಲ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢ ವಿಭಾಗ) ದಲ್ಲಿ ೨೦೨೫-೨೬ ನೇ ಸಾಲಿನ ಶಾಲಾ ಸಂಸತ್ತ ಚುನಾವಣೆ ಇ.ಎಲ್.ಸಿ. ಕ್ಲಬ್ ಅಡಿಯಲ್ಲಿ ನಡೆಯಿತು.
ಶಾಲಾ ಸಂಸತ್ತ ಚುನಾವಣೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ನಡೆಯಿತು, ನಾಮಪತ್ರ ಸಲ್ಲಿಕೆ ಹಿಡಿದು, ಚುನಾವಣಾ ಪ್ರಚಾರ, ನಾಮ ಪತ್ರ ಹಿಂಪಡೆಯುವಿಕೆ, ಮತದಾನ, ಫಲಿತಾಂಶ ಪ್ರಕಟಣೆ, ಶಾಲಾ ಸಂಸತ್ತ ರಚನೆ, ಮಂತ್ರಿಗಳ ಪದಗ್ರಹಣ ಹೀಗೆ ಎಲ್ಲವೂ ಚುನಾವಣೆ ಪ್ರಕ್ರಿಯೆಯನ್ನು ಒಳಗೊಂಡಿತ್ತು.
ಇ.ವ್ಹಿ.ಎಮ್. ಮತಯಂತ್ರದ ಮಾದರಿಯಲ್ಲಿಯೇ ಮೊಬೈಲ್ ಫೋನ್ ಬಳಕೆ ಮಾಡಿ ಮತದಾನ ಫಲಿತಾಂಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಚುಣಾವಣೆ ನೋಡಲ್ ಅಧಿಕಾರಿಯಾಗಿ ಶಿಕ್ಷಕಿ ಎಮ್.ಎಸ್. ಲುಗಡೆ ಕಾರ್ಯನಿರ್ವಹಿಸಿದರು. ಶಾಲೆಯ ಎಲ್ಲ ಶಿಕ್ಷಕರು, ಶಿಕ್ಷಕಿಯರು ಚುನಾವಣಾ ಕಾರ್ಯದಲ್ಲಿ ಸಹಕಾರ ನೀಡಿದರು.
ನಂತರ ಮಂತ್ರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಉಪ ಪ್ರಾಂಶುಪಾಲ ಎಸ್.ಆಯ್. ಚನಗೊಂಡ ಅಧ್ಯಕ್ಷತೆ ವಹಿಸಿದ್ದರು, ಶಾಲಾ ಸಂಸತ್ತ ಮಂತ್ರಿ ಮಂಡಳದಲ್ಲಿ ಪ್ರಧಾನಮಂತ್ರಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಮಂತ್ರಿಯಾಗಿ ನಿರಂಜನ ಮೇತ್ರಿ, ಉಪ ಪ್ರಧಾನಮಂತ್ರಿ, ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ ಮೈತ್ರಿ, ಕ್ರೀಡಾ ಮಂತ್ರಿಯಾಗಿ ಪ್ರಜ್ವಲ್ ಪವಾರ, ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಸೃಷ್ಟಿ ಕಂಠಿಕಾರ, ಹಣಕಾಸು ಮಂತ್ರಿಯಾಗಿ ಸುನಿತಾ ಬಿರಾದಾರ, ರಕ್ಷಣಾ ಮಂತ್ರಿಯಾಗಿ ಮಹಮ್ಮದ್ ಸೌದಾಗರ, ಪ್ರಾರ್ಥನಾ ಮಂತ್ರಿಯಾಗಿ ಸೋಮನಾಥ ಮಿರಗಿ, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ಕಾವೇರಿ ಕೋಳಿ, ಶಿಕ್ಷಣ ಮಂತ್ರಿಯಾಗಿ ಶ್ರೀಗೌರಿ ಜೋಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಯಾಗಿ ಶ್ರೇಯಸ ಕಟ್ಟಿಮನಿ, ಗ್ರಂಥಾಲಯ ಮಂತ್ರಿಯಾಗಿ ಅಜಿತ ಪವಾರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಮ್.ಎಸ್. ಲುಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

