ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರುಕುಂಪೂರ ರಸ್ತೆ ತೆರವು ಹಾಗೂ ವಿವಿದ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಮಂಗಳವಾರ ಪಟ್ಟಣದ ವಾಹನ ಚಾಲಕರು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡರು.
ವಾಹನ ಚಾಲಕ ಸುಬಾಸ ಗೋಳಸಾರ ಮಾತನಾಡಿ, ಪಟ್ಟಣದ ಒಳತಿಗಾಗಿ ಹಮ್ಮಿಕೊಂಡಿರುವ ಈ ಹೋರಾಟಕ್ಕೆ ವಾಹನ ಚಾಲಕರು ಇಂದು ವೃತ್ತಿಯನ್ನು ಬಂದ ಮಾಡಿ ಬೆಂಬಲಿಸಿದ್ದೆವೆ. ಆಲಮೇಲ ಪಟ್ಟಣದ ಒಳತಿಗಾಗಿ ಯಾವುದೆ ಹೋರಾಟ ಹಮ್ಮಿಕೊಂಡರು ಅದಕ್ಕೆ ನಮ್ಮ ವಾಹಾನ ಚಾಲಕರ ಸಂಘದಿಂದ ಬೆಂಬ ನೀಡುವದಾಗಿ ಹೇಳಿದರು.
ಹೋರಾಟದ ನೇತೃತ್ವ ವಹಿಸಿದ ಹರಿಶ ಎಂಟಮಾನ, ಶಿವು ಮೇಲಿಮನಿ, ಶಶಿ ನಾಯ್ಕೋಡಿ, ವಾಹನ ಚಾಲಕರಾದ ಸುಬಾಸ ಗೋಳಸಾರ, ರಮೇಶ ಗುರಕಾರ, ಅಬ್ದುಲ್ ಯಾದಗಿರಿ, ಶ್ರೀಶೈಲ ಬಮ್ಮನಹಳ್ಳಿ, ಪಿಂಟು ಕರೆ, ವಿಶ್ವನಾಥ ಬಾಳಿ, ಈರಣ್ಣ ಕನ್ನೂಳ್ಳಿ, ಸಂದೀಪ ಮಾನೆ, ಸಂಜು ಕಾಳೆ, ಸಂದೀಪ ಆಲಮೇಲಕರ, ಸಂತೋಷ ಗುರಕಾರ, ಹಸನ್ ಶೇಖ್, ಬಾಬು ತಾಳಿಕೋಟಿ, ಪ್ರಕಾಶ ಬ್ಯಾಕೋಡ ಮುಂತಾದವರು ಇದ್ದರು.

