ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಬೆಳೆಗಳಿಗೆ ಮುಂಗಾರು ಹಂಗಾಮಿ ಬೆಳೆ ವಿಮೆಗೆ ಓರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿಗೆ ಹಂಚಿಕೆಯಾಗಿದ್ದು, ರೈತರು ವಿಮೆ ಕಂತು ಭರ್ತಿ ಮಾಡಬಹುದಾಗಿದೆ.
ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಮಳೆ ಆಶ್ರಿತ ಹಾಗೂ ನೀರಾವರಿ ಆಶ್ರಿತ ತೊಗರಿ, ಮಳೆ ಆಶ್ರಿತ ಸಜ್ಜೆ ಹಾಗೂ ನೀರಾವರಿ ಮುಸುಕಿನ ಜೋಳ ಬೆಳೆ ಹಾಗೂ ಹೋಬಳಿ ಮಟ್ಟದ ಬೆಳೆ ನೀರಾವರಿ ಆಶ್ರಿತ ಶೇಂಗಾ ಸೇರಿದಂತೆ ಇತರ ಬೆಳೆ ವಿಮೆಗೆ ಕಂತು ತುಂಬಲು ಜುಲೈ ೩೧ ಕೊನೆಯ ದಿನವಾಗಿದೆ.
ಮಳೆ ಆಶ್ರಿತ ಹತ್ತಿ ಬೆಳೆ, ನೀರಾವರಿ ಆಶ್ರಿತ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ಕಂತು ತುಂಬಲು ಆಗಸ್ಟ್ ೧೬ ಕೊನೆಯ ದಿನವಾಗಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆಯ ಕಚೇರಿ ಹಾಗೂ ಓರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿಜಯಪುರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
