ಉದಯರಶ್ಮಿ ದಿನಪತ್ರಿಕೆ
ಆಲಮೇಲ: ನಮ್ಮ ಶಾಲೆಯ ಮಕ್ಕಳಿಗೆ ಪ್ರೇರಣೆ ಆಗಲು ಕುಮಾರಿ ನಮೃತಾ ಕತ್ತಿ ರವರ ರಚಿಸಿರುವ ‘ನಾನು ಕೈಗೊಂಡ ಕಾಶ್ಮೀರ ಪ್ರವಾಸ ಕಥನ’ ಅತ್ಯಂತ ಮಹತ್ವ ಪಡೆದಿದೆ. ಬೀಳ್ಕೊಡುವ ಸಮಾರಂಭದ ಅಂಗವಾಗಿ “ವಿದ್ಯಾರ್ಥಿಗಳು ಶಿಕ್ಷಕರಾಗಿ ಪಾಠ ಬೋಧನೆ ಮಾಡಿರುವುದು ಮಕ್ಕಳ ಸೃಜನಶೀಲತೆ ಎತ್ತಿ ತೋರಿಸುತ್ತದೆ” ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಜೋಗೂರ ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದ ಕುದರತ್ ಅಲಿ ಭೂಸನೂರ, ಈ ಶಾಲೆಯ ಮಕ್ಕಳು ಅದೃಷ್ಟವಂತರು. ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡಲು ಪ್ರತಿ ತರಗತಿಯಲ್ಲಿ ಡಿಜಿಟಲ್ ಪೆನೆಲ್ ಬೋರ್ಡ್ ಗಳನ್ನು ಅಳವಡಿಸಿ, ಮಕ್ಕಳಿಗೆ ಮೌಲ್ಯಭರಿತ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಸಂಸ್ಥೆಯ ವತಿಯಿಂದ ಪಟ್ಟಣದ ಬಾಲಲೇಖಕಿ ಕು.ನಮೃತಾ ಕತ್ತಿ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಈ ವೇಳೆ ಸಾನಿಧ್ಯವನ್ನು ಈಶ್ವರಿಯ ವಿಶ್ವವಿದ್ಯಾಲಯದ ರೇಣುಕಾ ಅಕ್ಕನವರು, ಅತಿಥಿಗಳಾಗಿ ಬಾಲ ಸಾಹಿತಿ ನಮೃತಾ ಕತ್ತಿ, ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮೀ ಕತ್ತಿ, ಸಾಹಿತಿ ಕುದರತ್ ಅಲಿ ಭೂಸನೂರ, ಸಂಸ್ಥೆಯ ಸದಸ್ಯರಾದ ಅರವಿಂದ ಕುಲಕರ್ಣಿ, ಅಲೋಕ ಬಡದಾಳ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕರಾದ ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ಸುನೀತಾ ಗುಂಡದ, ಸರುಬಾಯಿ ಬಂಡಗರ, ವೀಣಾ ಗುಡಿಮಠ, ಯಲ್ಲಪ್ಪ ಬಿರಾದಾರ, ಕುಮಾರ ಪೂಜಾರಿ, ಸಿಧ್ಧಾರಾಮ ಅಮರಗೊಂಡ ಮೊದಲಾದವರಿದ್ದರು.