ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಎಸ್.ಎಸ್.ಎಲ್.ಸಿ ಪರೀಕ್ಷೆ ಶುಕ್ರವಾರ ಆರಂಭಗೊಂಡಿದ್ದು ಮೊದಲ ದಿನ ಪರೀಕ್ಷೆ ಸುಸುತ್ರವಾಗಿ ನಡೆದಿದೆ.
ಆಲಮೇಲ ಪಟ್ಟಣದಲ್ಲಿ ಎರಡ ಪರೀಕ್ಷಾ ಕೇಂದ್ರಗಳಿದ್ದು ಒಂದು ಎ.ಕೆ. ನಂದಿ ಪ್ರೌಢ ಶಾಲೆಯಲ್ಲಿ ಮತ್ತೊಂಡು ನಿರ್ಮಲಾಲಯ ಶಾಲೆಯಲ್ಲಿ ಸೂಕ್ತ ಬಂದೊಬಸ್ತಿನಲ್ಲಿ ಪರೀಕ್ಷೆ ನಡೆಸಲಾಗಿದೆ. ಕಳೆದ ವರ್ಷ ಇಕ್ರಾ ಶಾಲೆಯಲ್ಲಿನ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಿ ಈ ವರ್ಷ ಹೊಸದಾಗಿ ನಿರ್ಮಲಾಲಯ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ಮಾಡಲಾಗಿದೆ. ವೆಬ್ ಕಾಸ್ಟಿಂಗ ಇರುವದರಿಂದ ವಿದ್ಯಾರ್ಥಿಗಳಿಗೆ ನಕಲು ಮುಕ್ತಗೊಳಿಸಲು ಎಲ್ಲ ವಿದ್ಯಾರ್ಥಿಗಹಳನ್ನು ಪರೀಶಿಲಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗಿದೆ. ಎ.ಕೆ. ನಂದಿ ಪ್ರಾಢ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಪರಿಶಿಲಿಸಿ ಒಳಗೆ ಬಿಡುವದು ಕಂಡು ಬಂತು. ಹಾಗೆ ನಿರ್ಮಲಾಲಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶಾಲಾ ಆವರಣದ ಗೆಟ್‌ನಲ್ಲಿಗೆ ವಿದ್ಯಾರ್ಥಿಗಳನ್ನು ಪರಿಶೀಲಿಸಿ ಒಳಗೆ ಕಳುಹಿಸುತ್ತಿರುವದು ಕಂಡು ಬಂದಿದೆ.
ಕಳೆದ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವೆಬ್ ಕಾಸ್ಟ ಮೂಲಕ ನಕಲು ಮುಕ್ತ ಪಾರದರ್ಶ ಪರೀಕ್ಷೆಗಳು ನಡೆಸಲಾಗುತ್ತಿದೆ. ಕಳೆದ ವರ್ಷ ವೆಬ್ ಕಾಸ್ಟ ಬಗ್ಗೆ ಸರಿಯಾದ ಮಾಹಿತಿ ಇಲ್ಲದರಿಂದ ಕೆಲವು ಗೊಂದಲಗಳಾಗಿದ್ದವು ಈ ಬಾರಿ ಮುಂಚಿತವಾಗಿ ಪರೀಕ್ಷಾ ಕೇಂದ್ರದ ಶಾಲಾ ಆಡಳಿತ ಮಂಡಳಿ ಸರಿಯಾದ ವ್ಯವಸ್ಥೆ ಮಾಡಿಕೊಂಡಿದ್ದರು.
ಪರೀಕ್ಷಾ ಕೇಂದ್ರದ ೨೦೦ ಮೀಟರ್ ನಿಷೇದಾದಜ್ಞೆಗೊಳಿಸಲಾಗಿತ್ತು ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಿದರು.