ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ನಕಲು ಮುಕ್ತ ಪರೀಕ್ಷೆ ನಡೆಸಬೇಕು, ಅಚ್ಚುಕಟ್ಟುತನದಿಂದ ಶಿಸ್ತುಬದ್ದವಾಗಿ ಯಶಸ್ವಿಯಾಗಿ ಸೂಸುತ್ರವಾಗಿ ಪರೀಕ್ಷೆ ನಡೆಸಲಾಗುವದು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಎಂ.ಅವಟಿ ಹೇಳಿದರು.
ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಮಾಣಿಕೇಶ್ವರಿ ಪ್ರೌಢ ಶಾಲೆಯಲ್ಲಿ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರ ಸಭೆ ಏರ್ಪಡಿಸಿ ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ ಅವರ ನಿರ್ದೇಶನದಂತೆ ನಿಷ್ಪಕ್ಷವಾಗಿ ಶಾಂತವಾಗಿ ಕಾಫಿ ಮಾಡದೆ ಮಕ್ಕಳು ಪರೀಕ್ಷೆ ಬರೆಯಬೇಕು. ಮಕ್ಕಳಿಗೆ ಭಯಮುಕ್ತ ಪರೀಕ್ಷೆ ನಡೆಸಬೇಕು. ಇಡೀ ಪರೀಕ್ಷಾ ಕೇಂದ್ರವು ಸಿಸಿ ಕ್ಯಾಮರಾ ನಿಗಾದಲ್ಲಿ ಇರುವದು. ಬಿಇಓ ಕಛೇರಿಯಲ್ಲಿ 40 ಗಣಕಯಂತ್ರ, ಡಿಡಿಪಿಐ ಕಛೇರಿ 40 ಗಣಕಯಂತ್ರ, ಜಿಪಂ ಕಛೇರಿಯಲ್ಲಿ 40 ಗಣಕಯಂತ್ರ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಿಗಾ ವಹಿಸಲು 40 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಪರೀಕ್ಷೆ ನಡೆಯುವ ಒಂದು ಗಂಟೆ ಮೊದಲು ಕೊಠಡಿ ಮೇಲ್ವಿಚಾರಕರು ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು. ಅರ್ಧ ಗಂಟೆ ಮೊದಲೆ ಮೇಲ್ವಿಚಾರಕರು ಕೊಠಡಿ ಒಳಗೆ ಇರಬೇಕು. ಪ್ರತಿ ಮಗುವಿನ ಹತ್ತಿರ ಚೀಟಿ ಇರದೇ ಇರುವದನ್ನು ಖಾತ್ರಿ ಮಾಡಿಕೊಳ್ಳಲು ಒಬ್ಬೊಬ್ಬರಿಗೆ ತಪಾಸಣೆ ಮಾಡಬೇಕು.
ಉತ್ತರ ಪತ್ರಿಕೆ ಬುಕ್ ಲೇಟ್ ನಂಬರ ಬರೆಯಬೇಕು. ಅಭ್ಯರ್ಥಿಯ ಸಹಿ ಮಾಡಿಕೊಳ್ಳಬೇಕು. ಪ್ರವೇಶ ಪತ್ರ, ನಾಮಿನಲ್ ರೊಲ್ ತಪಾಸಣೆ ಮಾಡಿಕೊಂಡು ಅಭ್ಯರ್ಥಿ ಅವರೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಕೇಂದ್ರದ ಒಳಗೆ ಬಂದ ಕೂಡಲೇ ಮೊಬೈಲ್ ಗಳನ್ನು ಮೊಬೈಲ್ ಸ್ವಾಧಿನಾಧಿಕಾರಿಗಳಿಗೆ ಒಪ್ಪಿಸಬೇಕು. ಗುರುತಿನಿ ಚೀಟಿ ಇಲ್ಲದವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶವಿಲ್ಲ. ಸೂಕ್ತ ಪೋಲಿಸ್ ಬಂದೋಬಸ್ತ ಇರುವದು. ಒಬ್ಬ ಪಿಎಸ್ಐ ಆರು ಜನ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿರುತ್ತಾರೆ.
ಸಂಸ್ಥೆಯ ಮುಖ್ಯೋಪಾಧ್ಯಾಯ ಎಸ್.ಎಂ.ಅವಟಿ ಮಾತನಾಡಿ ಸುಸೂತ್ರ ಪರೀಕ್ಷೆ ನಡೆಯಲು ಪರೀಕ್ಷಾ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ಕೇಂದ್ರದ ಸುತ್ತ ಸಾರ್ವಜನಿಕರು ಪ್ರವೇಶ ಮಾಡದಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕೂಡಾ ಪರೀಕ್ಷಾ ಕೇಂದ್ರಸ ಸುತ್ತ ಗಲಾಟೆ, ದಾಂಧಲೆ ಮಾಡಿ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆ ನೀಡಬಾರದು ಎಂದು ಈ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಉಪ ಅಧಿಕ್ಷಕರು ಬಿ.ಎಂ.ಬಡಿಗೇರ, ಕಸ್ಟೋಡಿಯನ್ ಸಿ.ಎಲ್.ಪಾಟೀಲ್, ಎಂ.ಡಿ. ಪಡಂದಾರ, ಬಿ.ಸಿ.ನಾವಿ, ಆನಂದ ಝಂಡೆ, ಗಜಾನಂದ ಜುಂಜರವಾಡ, ಎಸ್.ಎನ್.ಬಾಗಲಕೋಟ ಇತರರಿದ್ದರು.