ಸಿ0ದಗಿ: ವಿಧಾನಸಭಾ ಮತಕ್ಷೇತ್ರದ ಹಾಲುಮತ ಸಮಾಜದ ಮುಖಂಡರು ಹಾಗೂ ಸಮಾಜ ಬಂಧುಗಳು ಮಾಜಿ ಮುಖ್ಯಮಂತ್ರಿ ಹಾಲುಮತ ಸಮಾಜದ ನಾಯಕ ಸಿದ್ರಾಮಯ್ಯನವರ ಕೈ ಬಲಪಡಿಸಲು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿಯವರಿಗೆ ಸೋಮವಾರ ಒಕ್ಕೋರಲಿನಿಂದ ಬೆಂಬಲ ವ್ಯಕ್ತಪಡಿಸಿದರು.
ಈ ವೇಳೆ ಅನೇಕ ಮುಂಖಡರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೂಡಿ ಬಿಜೆಪಿ ಪಕ್ಷವನ್ನು ತಳÀಮಟ್ಟದಿಂದ ಕಟ್ಟಿ ಬೆಳೆಸಿದ ಕುರುಬ ಸಮಾಜದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪೂರ್ಣವಾಗಿ ಮೂಲೆ ಗುಂಪು ಮಾಡಿದ ಬಿಜೆಪಿ ಪಕ್ಷವನ್ನು ಯಾವುದೇ ಕಾರಣಕ್ಕೂ ನಮ್ಮ ಕುರುಬ ಸಮಾಜ ಬೆಂಬಲಿಸುವುದಿಲ್ಲ.
ಒಬ್ಬ ಕುರುಬ ಸಮಾಜದ ವ್ಯಕ್ತಿಯನ್ನು ಈ ರಾಜ್ಯದ ಉನ್ನತ ಹುದ್ದೆಗೆ ಮುಖ್ಯಮಂತ್ರಿ ಗದ್ದುಗೆ ಏರಿಸಿ ಬೆಳೆಸಿದ ಕಾಂಗ್ರೇಸ್ ಪಕ್ಷವನ್ನು ಹಾಲುಮತ ಸಮಾಜ ಎಂದೂ ಮರೆಯುವುದಿಲ್ಲ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಬೆಂಬಲಿಸಿದರೆ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಸಿದ ಹಾಗೆ. ಆದ್ದರಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿಯವರಿಗೆ ನಮ್ಮ ಹಾಲು ಮತ ಸಮಾಜ ಬೆಂಬಲವನ್ನು ಸೂಚಿಸಿದೆ.
ನಮ್ಮ ಸಮಾಜ ಬಿಜೆಪಿ ಪಕ್ಷಕ್ಕೆ ಬೆಂಬಲ ಎಂದು ನಿನ್ನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಸಿಂದಗಿ ಕುರುಬ ಸಮಾಜದ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ ಅವರ ಹೇಳಿಕೆ ಸುಳ್ಳಾಗಿದೆ. ಸಿಂದಗಿ ಮತಕ್ಷೇತ್ರದ ಹಾಲುಮತ ಸಮಾಜ ಯಾರ ಮನೆಯ ಸ್ವತ್ತಲ್ಲ. ಹಿರಿಯರ ಜೊತೆ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂತಹ ನಿರ್ಧಾರಗಳು ತಪ್ಪಾಗಿರುತ್ತದೆ. ಅದನ್ನು ಕುರುಬ ಸಮಾಜದ ನಾವು ಯಾರೂ ಒಪ್ಪುವುದಿಲ್ಲ ಎಂದರು.
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಮಾಜಿ ತಾಲೂಕ ಪಂಚಾಯಿತಿ ಸದಸ್ಯರು, ಭೀಮರಾಯ ಅಮರಗೋಳ, ಮಾಜಿ ತಾಲೂಕ ಕುರುಬ ಸಮಾಜದ ಅಧ್ಯಕ್ಷ ರಾಜು ಪುಜಾರಿ, ಭೀಮರಾಯ ಶೀತಿಮನಿ, ಮಡ್ಡಪ್ಪ ಸೊನ್ನದ, ಭೀಮು ಪೂಜಾರಿ, ಶ್ರೀಶೈಲ ಕೌಲಗಿ, ನಿಂಗಣ್ಣ ಬುಳ್ಳಾ, ಬಲವಂತರಾಯಗೌಡ ಬಿರಾದಾರ ಗುಬ್ಬೆವಾಡ, ಈರಣ್ಣ ನಾಯ್ಕೋಡಿ, ಕಲ್ಲಪ್ಪ ಬಳುಂಡಗಿ, ರೇವಣ್ಣ ಶೀತಿಮನಿ, ಶ್ರೀನಿವಾಸ ಉಕ್ಕಲಿ, ಲಕ್ಷö್ಮಣ ಜೇವರ್ಗಿ, ಸುರೇಶ ಪಾಟೀಲ ಭೀಮನಗೌಡ ಬಿರಾದಾರ, ವಾಯ್.ಬಿ. ಕೇಣಿ, ದೇವಿಂದ್ರ ಪೂಜಾರಿ ಹಾಗೂ ಬಸವರಾಜ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment