ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ;
ಇಲ್ಲಿ ಪಾರ್ವತಿ ಕಟ್ಟಾ ಸೇತುವೆ ಬಳಿಯ
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ವ್ಯಕ್ತಿಯೊಬ್ಬ ಬಿದ್ದು ಮೃತಪಟ್ಟ ಘಟನೆ ಬುಧವಾರ ಜರುಗಿದೆ.
ಮೃತ ವ್ಯಕ್ತಿ ಆಲಮಟ್ಟಿ ಆರ್.ಎಸ್. ಗ್ರಾಮದ ಮಹೇಂದ್ರಕುಮಾರ ಶಂಕ್ರಪ್ಪ ರಾಠೋಡ (43).
ಈ ವ್ಯಕ್ತಿ ಕಳೆದ ಎರಡು ದಿನದಿಂದ ಕಾಣೆಯಾಗಿದ್ದ ಎನ್ನಲಾಗಿದೆ.
ಬುಧವಾರ ಮೃತನ ಶವ ಕಾಲುವೆಯಲ್ಲಿ ತೇಲುತ್ತಿತ್ತು. ಸಂಜೆ ಪೊಲೀಸರ ಸಮ್ಮುಖದಲ್ಲಿ ಮೃತ ವ್ಯಕ್ತಿಯ ದೇಹ ಹೊರ ತೆಗೆಯಲಾಯಿತು.
ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
