ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸುಪ್ರಸಿದ್ಧ ಯಲಗೂರ ಕ್ಷೇತ್ರದ ಶ್ರೀ ಯಲಗೂರೇಶನ ಕಾರ್ತಿಕೋತ್ಸವವು ಪಾಲ್ಗುಣ ಮಾಸ ಷಷ್ಠಿ, ಸಪ್ತಮಿ ೦೭ ಮತು ೮ ರಂದು ಅದ್ದೂರಿಯಾಗಿ ಜರುಗುವುದು. ಆ ದಿನ ಬೆಳಿಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, ಮುಂಜಾನೆ ೧೦ ಗಂಟೆಗೆ ದಿಂಡಿನ ಸ್ಪರ್ಧೆ, ತೀರ್ಥ ಪ್ರಸಾದ, ಹರಿದಾಸರ ಕೀರ್ತನೆ ಹಾಗೂ ಈ ಕೆಳಗಿನಂತೆ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದು ್ದ, ರಾತ್ರಿ ಕಾರ್ತಿಕೋತ್ಸವ ನಡೆಯಲಿದೆ. ಪಂ. ಬಸವರಾಜ ಭಜಂತ್ರಿ, ಸಹನಾಯಿ, ಶ್ರೀಮತಿ ಅದಿತಿ ದೇಸಾಯಿ, ಕುಮಾರ ಹೃಷಿಕೇಶ ಅರಬಟ್ಟಿ, ಕುಮಾರಿ ವೈಷ್ಣವಿ ಜೋಶಿ, ಶ್ರೀಮತಿ ಪ್ರೇಮಾ, ಸ್ನೇಹಾ ಕಡಿವಾಲ, ಡಾ.ಶ್ರೀಮತಿ ಸಂಗೀತಾ ಕಾಖಂಡಕಿ, ಶ್ರೀ ನಾರಾಯಣ ತಾಸಗಾವ, ಶ್ರೀ ಸಂತೋಷ ಗದ್ದನಕೇರಿ, ಶ್ರೀಮತಿ ಪರಿಮಳ ಗಿರಿಯಾಚಾರ್ಯ, ಶ್ರಿ ಬಿ.ಬಿ. ಕುಲಕರ್ಣಿ, ಕುಮಾರಿ ಭಾಗ್ಯ ಕುಲಕರ್ಣಿ, ಕುಮಾರಿ ಸುನಯನಾ ಮನೋಹರ ದೇಶಪಾಂಡೆ, ವಿಧೂಷಿ ಶ್ರೀಮತಿ ರೇಣುಕಾ ನಾಕೋಡ್, ಪಂ. ಶ್ರೀ ರಘುನಾಥ ನಾಕೋಡ್ ಮತು ್ತ ಪಂ. ಶ್ರೀ ರವಿಕಿರಣ ನಾಕೋಡ್, ಕುಮಾರಿ ವಿಭಾ ಹೆಗಡೆ, ವಿಧೂಷಿ ಶ್ರೀಮತಿ ಗಾಯತ್ರಿ ದೇಶಪಾಂಡೆ, ಕುಮಾರ ನಯನ ಯಾವಗಲ್, ಕುಮಾರ ರಜತ ಕುಲಕರ್ಣಿ, ಪಂ. ನೌಶಾದ್, ಪಂ. ನಿಶಾದ ಹರ್ಲಾಪುರ, ಪಂ. ಕುಮಾರ ಮರಡೂರು, ಡಾ. ಶ್ರೀಮತಿ ವೀಣಾ ಸವದತ್ತಿ, ಪಂ. ಶ್ರೀ ರಾಜೇಂದ್ರ ದೇಶಪಾಂಡ, ಡಾ. ವಿದುಷಿ ಶ್ರೀಮತಿ ಸಂಗೀತಾ ಕಟ್ಟಿ (ಕುಲಕರ್ಣಿ) ಇವರುಗಳಿಂದ ದಾಸವಾಣಿ, ಶ್ರೀಮತಿ ದುರ್ಗಾ ಶರ್ಮ ಇವರಿಂದ ವಯಲಿನ್, ಶ್ರೀ ಚಂದ್ರಶೇಖರ್ ಆಲೂರ ಮತು ್ತ ಶ್ರೀ ಶಿವಕುಮಾರ ತಂಡ ಇವರಿಂದ ಮೆಲೊಡಿಕಾ ಮತು ್ತ ಕೊಳಲು- ದಾಸ ಲಹರಿ, ಕುಮಾರ ಶ್ರೀನಿಧಿ ಹರಿಮಂದಿರ ಇವರಿಂದ ಕೊಳಲು, ಪಂ. ಶ್ರೀ ಶ್ರೀಕಾಂತಾಚಾರ್ಯ ಬಿದರಕುಂದಿ ಇವರಿಂದ ಉಪನ್ಯಾಸ, ಪಂ. ಶ್ರೀ ರುದ್ರೇಶ್ ಭಜಂತ್ರಿ ಇವರಿಂದ ಶಹನಾಯಿ, ಸಾಯಂಕಾಲ ೪-೦೦ ಗಂಟೆಗೆ ಪ್ರಸಾದ ವಿತರಣೆ ಮೇಲಿನಂತೆ ಅಹೋರಾತ್ರಿ ಸಂಗೀತ, ಸಾಂಸ್ಕೃತಿಕ, ದಾಸವಾಹಿನಿ ಕಾರ್ಯಕ್ರಮಗಳು ಹಾಗೂ ಸಮಾರಂಭ, ಮತ್ತು ಬೆಳಗು ಮುಂಜಾನೆ ಪಲ್ಲಕ್ಕಿ ಸೇವೆ, ಕಕ್ಕಡದಾರತಿ ವ ದೀಪೋತ್ಸವ ಕಾರ್ತಿಕ ಇಳಿಸುವದು ವಗೈರೆ ಮುಂತಾದ ಕಾರ್ಯಕ್ರಮಗಳು ಜರುಗುವವು. ಫೆ.೮ ರಂದು ಹರಶವಿಗೆ ಹಾಗೂ ಅನ್ನಸಂತರ್ಪಣೆ, ಶ್ರೀ ಭೀರಲಿಂಗೇಶ್ವರ ಗೊಂಬೆ ಕುಣಿತ ಬಳಬಟ್ಟಿ ಇವರಿಂದ ಗೊಂಬೆಗಳ ಕುಣಿತ ಸಾಯಂಕಾಲ ರಥೋತ್ಸವ ಮತು ್ತ ಪ್ರಸಾದ ವಿತರಣೆ, ರಾತ್ರಿ ೮ ಕ್ಕೆ ಹೊಂಡ ಪೂಜೆ, ಪಂ. ಶ್ರೀ ಕೆ. ಆನಂದಕುಮಾರ್, ಪಂ. ಶ್ರೀ ವಸುಧೇಂದ್ರ ವೈದ್ಯ, ಪಂ. ಶ್ರೀ ವಿಜಯಕುಮಾರ ಪಾಟೀಲ ಇವರಿಂದ ದಾಸವಾಣಿ, ಪಂ. ಶ್ರೀ ಪ್ರವೀಣ ಹೂಗಾರ ಇವರಿಂದ ಸಿತಾರ್, ಪಂ.ಶ್ರೀ ಪ್ರವೀಣ ಗೋಡಖಿಂಡಿ ಮತ್ತು ಕುಮಾರ ಷಡ್ಜ ಗೋಡಖಿಂಡಿ, ಪಂ. ಶ್ರೀ ರವೀಂದ್ರ ಯಾವಗಲ್ ಮತ್ತು ಪಂ. ಶ್ರೀ ಕಿರಣ ಯಾವಗಲ್ ಇವರುಗಳಿಂದ ಕೊಳಲು ಮತ್ತು ತಬಲಾ ಜುಗಲ್ ಬಂದಿ ಪಂ. ಜಯತೀರ್ಥ ಮೆವುಂಡಿ ಹಾಗೂ ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿ ಇವರುಗಳಿಂದ ದಾಸವಾಣಿ ನಡೆಯಲಿದೆ. ದಿನಾಂಕ ಫೆ.೮ರ ರಾತ್ರಿ ೧೦-೩೦ ಕ್ಕೆ ತಾಯಿಯ ಋಣ ಮಣ್ಣಿನ ಗುಣ ನಾಟಕ ಪ್ರದರ್ಶನ ನಡೆಯಲಿದೆ.. ದಿನಾಂಕ ಫೆ.೯ರಂದು ಸಾಯಂಕಾಲ ೪ ಗಂಟೆಗೆ ಹಾಗೂ ಜಂಗೀ ಕುಸ್ತಿಗಳು ಜರುಗುವವು, ಅದೇ ದಿನ ರಾತ್ರಿ ೧೦.30ಕ್ಕೆ ತಾಯಿ ಇಲ್ಲದ ತವರು ನಾಟಕ ಪ್ರದರ್ಶನ ನಡೆಯಲಿದೆ. ಭಕ್ತಾಧಿಗಳು ಆಗಮಿಸಿ ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀ ಯಲಗೂರೇಶನ ಕೃಪೆಗೆ ಪಾತ್ರರಾಗಿ ಕಾರ್ತಿಕೋತ್ಸವ ಮತ್ತು ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯಲು ಸಹಕರಿಸಬೇಕೆಂದು ಶ್ರೀ ಯಲಗೂರೇಶ ದೇವಸ್ಥಾನ ಕಮಿಟಿಯವರು ಕೋರಿದ್ದಾರೆ. ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

