ಸಿಂದಗಿ: ಪಟ್ಚಣದ ಸ್ವರ ತರಂಗ ಸಂಗೀತ ಶಾಲೆಯಲ್ಲಿ ಸೋಮವಾರ ಸಂಜೆ ಡಾ.ಗೌತಮ್ ಚೌಧರಿ ಅಭಿಮಾನಿ ಬಳಗದಿಂದ ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಅವರ ಜನುಮದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಆಯೋಜನೆ ಮಾಡಿದ ಮುಖಂಡ ಅವಿನಾಶ ಯಂಕಂಚಿ ಮಾತನಾಡಿ, ಕೋವಿಡ್ ಸಂದರ್ಭ ಡಾ.ಗೌತಮ್ ಚೌಧರಿಯವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದಿನದ ೧೪ ಗಂಟೆ ಪಿಪಿ ಕಿಟ್ ಧರಿಸಿಕೊಂಡು ಕೋವಿಡ್ ರೋಗಿಗಳ ಶುಶ್ರೂಷೆ ಮಾಡಿ ಅನೇಕ ಜೀವಗಳನ್ನು ಉಳಿಸಲು ನೆರವಾದವರು. ಅವರು ನಮ್ಮಂಥ ಯುವಕರಿಗೆ ಮಾದರಿ. ಅವರ ಸೇವಾ ಮನೋಭಾವ, ಮಾನವೀಯ ಕಳಕಳಿ ನಮಗೆಲ್ಲ ಪ್ರೇರಣೆ ಎಂದರು.
ಡಾ.ಗೌತಮ್ ಚೌಧರಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಬದುಕಿನಲ್ಲಿ ಪ್ರಾಮಾಣಿಕತೆ, ಶಿಸ್ತು, ಸಂಯಮ, ಬದ್ಧತೆ ಅಳವಡಿಸಿಕೊಂಡು ಕಾಯಕ ನಿಷ್ಠರಾಗಿ ಕುಟುಂಬಕ್ಕೆ ಬೆಳಕಾಗಬೇಕೆಂದು ಕಿವಿಮಾತು ಹೇಳಿದರು.
ಬಿಜೆಪಿ ಮುಖಂಡ ಮುತ್ತು ಶಾಬಾದಿ, ನಿವೃತ್ತ ಪ್ರಾಚಾರ್ಯ ಬಿ.ಎಂ.ಬಿರಾದಾರ, ನೌಕರರ ಸಂಘದ ಮುಖಂಡ ರಾಜು ನರಗೋದಿ, ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಬ ನಾಗಾವಿ, ಭೀಮು ಅತಾಪಿ, ಯರಗಲ್ ಕೆ.ಡಿ ಗ್ರಾಮದ ಯಂಕಂಚಿ ಸಹೋದರರು ಸೇರಿದಂತೆ ಅನೇಕರಿದ್ದರು.