ಆಲಮೇಲ: ಉಪ ಚುನಾವಣೆಯ ನಂತರ ಸಿಕ್ಕ ೧೬ ತಿಂಗಳ ಅವಧಿಯಲ್ಲಿ ಜನತೆಗೆ ಕೊಟ್ಟ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಭೂಸನೂರ ಹೇಳಿದರು.
ಅವರು ಸಮೀಪದ ಹೊಸತಾರಾಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಮಾತನಾಡಿದರು, ಅಲ್ಪ ಅವಧಿಯಲ್ಲಿ ತಳವಾರ ಸಮಾಜಕ್ಕೆ ಎಸ್‌ಟಿ ಸರ್ಟಿಫಿಕೇಟ್ ನೀಡುವದು, ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವದು, ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವದರಿAದ ಜನರು ಮತ್ತೆ ನನ್ನ ಕೈ ಬಲಪಡಿಸಬೇಕೆಂದು ಕೇಳಿಕೊಂಡರು.
ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಮುಖಂಡ ಮಲ್ಲಿಕಾರ್ಜುನ ಜೋಗೂರ, ಜಿಪಂ ಮಾಜಿಸದಸ್ಯ ಬಿ.ಆರ್.ಎಂಟಮಾನ, ಅಯೂಬ ದೇವರಮನಿ, ವೀರಭದ್ರ ಕತ್ತಿ, ರಾಜಶೇಖರ ಪೂಜಾರ, ಗುರು ತಳವಾರ, ಸಿದ್ದಯ್ಯ ಮಠ, ರೇವಣಸಿದ್ದಯ್ಯ ಹಿರೇಮಠ, ಗಾಲಿಬ ನಾಗಾವಿ, ಅಮರೇಶ ಸಾಲಕ್ಕಿ, ಶಿವು ನಾಗಾವಿ, ಹಣಮಂತ ಹಾಳಕಿ ಇದ್ದರು.
ಇದೇ ಸಂದರ್ಭದಲ್ಲಿ ಕಡಣಿ, ಹೊಸತಾವರಖೇಡ, ಹಳೆತಾವರಖೇಡ, ಹಳೆತಾರಾಪುರ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment