ಸಿಂದಗಿ: ಮತಕ್ಷೇತ್ರದಲ್ಲಿ ಶಾಸಕ ರಮೇಶ ಭೂಸನೂರ ಅವರ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದ್ದು ಅದು ಮುಂದುವರೆಯಲು ಭೂಸನೂರ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಬೇಕೆಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಮನವಿ ಮಾಡಿದರು.
ಶನಿವಾರ ತಾಲೂಕಿನ ಗಬಸಾವಳಗಿ, ಯರಗಲ್ ಕೆ.ಡಿ, ಹಂಚಿನಾಳ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿ ಅವರು ಮಾತನಾಡಿದರು.
ಜಾತ್ಯಾತೀತ ನಿಲುವಿನ ರಮೇಶ ಭೂಸನೂರ ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವವುಳ್ಳ ಸರಳ ವ್ಯಕ್ತಿಯಾಗಿದ್ದಾರೆ. ಕಳೆದ ೧೬ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ತಂದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಸೇವೆಗೆ ತಾವು ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಕೋರಿದರು.
ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಬ ನಾಗಾವಿ ಕರಪತ್ರ ವಿತರಿಸಿದರು.
ಗಬಸಾವಳಗಿ ಗ್ರಾಮಸ್ಥರಾದ ಸಾಹೇಬಗೌಡ ಬಳುಂಡಗಿ, ಶಾಂತಗೌಡ ಬಿರಾದಾರ, ಬಂಗಾರೆಪ್ಪಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ರಾಮನಗೌಡ ನಂದರ್ಗಿ, ಬೀರಪ್ಪ ಪೂಜಾರಿ, ಶರಣಗೌಡ ಬಿರಾದಾರ, ಬಸಣ್ಣ ತೇಲಿ, ನಾಗಪ್ಪ ಹೂಗಾರ ಸೇರಿದಂತೆ ಹಲವರಿದ್ದರು.
ಬಿಜೆಪಿ ಪರ ಡಾ.ಗೌತಮ್ ಚೌಧರಿ ಪ್ರಚಾರ
ಮೋರಟಗಿ: ಸಮೀಪದ ಯರಗಲ್ ಕೆ.ಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಭೂಸನೂರ ಪರ ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಶನಿವಾರ ಸಂಜೆ ಮತ ಯಾಚಿಸಿದರು.
ಗ್ರಾಪಂ ಮಾಜಿ ಸದಸ್ಯ ಗಾಲೀಬಸಾಬ ನಾಗಾವಿ, ಹೆಗ್ಗನದೊಡ್ಡಿ, ಗ್ರಾಮಸ್ಥರಾದ ಅವಿನಾಶ ಯಂಕಂಚಿ, ಮಲಕಣ್ಣ ಹುಡೇದ, ರವಿ ಯಂಕಂಚಿ, ಕಿರಣ ಯಂಕಂಚಿ, ಸಿದ್ದಾರ್ಥ ಯಂಕಂಚಿ, ನಿಂಗಣ್ಣ ಯಂಕಂಚಿ, ಭೂಪಣ್ಣ ಯಂಕಂಚಿ ಸೇರಿದಂತೆ ಅನೇಕರಿದ್ದರು.