ಸಿಂದಗಿ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅನೇಕ ನ್ಯಾಯವಾದಿಗಳು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರು, ಇದು ನನ್ನ ಚುನಾವಣೆ ಅಲ್ಲ, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಚುನಾವಣೆ. ಪಕ್ಷದ ರಾಜ್ಯ ನಾಯಕರಿಗೆ, ರಾಷ್ಟ್ರೀಯ ನಾಯಕರಿಗೆ ಗೌರವ ನೀಡಬೇಕೆಂದರೆ ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಾದರೆ ಮಾತ್ರ ಅದು ಸಾಧ್ಯವಾಗುತ್ತದೆ. ಒಂದು ಬಾರಿ ನನಗೆ ಅವಕಾಶ ನೀಡಿ, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ನಮ್ಮ ತಂದೆ ದಿ. ಎಂ.ಸಿ.ಮನಗೂಳಿ ಅವರ ಕನಸಿನ ಅನೇಕ ಅಭಿವೃದ್ಧಿಪರ ಯೋಜನೆಗಳನ್ನು ಕೈಗೆತ್ತಿಕೊಂಡು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂಬ ಪ್ರಾಮಾಣಿಕ ಭರವಸೆ ನೀಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ವೈ.ಸಿ.ಮಯೂರ್, ವಕೀಲರ ಸಂಘದ ಅಧ್ಯಕ್ಷ ಎಸ್.ಬಿ ದೊಡ್ಡಮನಿ, ಎಸ್.ಎಂ ಪಾಟೀಲ್, ರಾಜಶೇಖರ ಕುಚಬಾಳ, ವಕೀಲರಾದ ರಾಜಶೇಖರ್ ಚೌರ ಮಾತನಾಡಿದರು.
ಈ ವೇಳೆ ವಕೀಲರಾದ ಆರ್.ಎಮ್ ಚೌರ, ಎಸ್.ಬಿ ದೊಡಮನಿ, ಎಸ್.ಎಮ್.ಪಾಟೀಲ, ಎಸ್.ಬಿ ಖಾನಾಪುರ ಹಂಗರಗಿ ವಕೀಲರು, ಹಿರೇಮಠ ವಕೀಲರು, ಸೇರಿದಂತೆ ೧೬ನೇ ವಾರ್ಡಿನ ೭ಸ್ಟಾರ್ ಗ್ರೂಪ್ ನ ನೂರಾರು ಯುವಕರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ಕಾರ್ಯಕ್ರಮದಲ್ಲಿ ವಕೀಲ ಸಂಘದ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು
Subscribe to Updates
Get the latest creative news from FooBar about art, design and business.
ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರಿದ ನ್ಯಾಯವಾದಿಗಳು
Related Posts
Add A Comment