ಆಲಮೇಲ: ಕ್ಷೇತ್ರದ ಅಲ್ಪಸಂಖ್ಯಾತರ ಹಿತರಕ್ಷಣೆಗೆ ತಾವು ಸದಾ ಬದ್ಧರಿದ್ದು ತಮ್ಮನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸಿ ಚುನಾವಣೆಯಲ್ಲಿ ಗೆಲ್ಲಿಸುವಂತೆ ಬಿಜೆಪಿ ಅಭ್ಯರ್ಥಿ, ಶಾಸಕ ರಮೇಶ ಭೂಸನೂರ ಮನವಿ ಮಾಡಿದರು.
ಆಲಮೇಲದ ಜಾತಗಾರ ಓಣಿಯಲ್ಲಿ ನಡೆದ ಅಲ್ಪಸಂಖ್ಖಾತರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ಕೂದಲೆಳೆಯಷ್ಟೂ ನೋವಾಗದಂತೆ ನಡೆದುಕೊಂಡಿರುವೆ. ತಮ್ಮ ಗಲ್ಲಿಗಳಲ್ಲಿ ಒಂದು ಗೇಣು ಜಾಗ ಉಳಿಸದಂತೆ ಸಿಸಿ ರಸ್ತೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಬಿಜೆಪಿ ಮುಖಂಡ ಅಯೂಬ ದೇವರಮನಿ ಮಾತನಾಡಿ, ಬಾಬರಿ ಮಸೀದಿ ಧ್ವಂಸಗೊಂಡಿದ್ದು ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಎಂಬುದನ್ನು ಮುಸ್ಲಿಂ ಬಂಧುಗಳು ಮರೆಯಬಾರದು. ತಾಲೂಕಿನ ಅಲ್ಸಂಖ್ಯಾತರೆಲ್ಲ ನಮ್ಮ ಸಮಾಜದ ಹಿತೈಷಿ ಶಾಸಕ ಭೂಸನೂರ ಅವರನ್ನು ಬೆಂಬಲಿಸಬೇಕೆಂದು ಕೋರಿದರು.
ಬಿಜೆಪಿ ಮುಖಂಡ ಡಾ.ಗೌತಮ ಚೌಧರಿ ವೇದಿಕೆ ಮೇಲಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರು ತಮ್ಮ ಹಲವು ಬೇಡಿಕೆಗಳನ್ನು ಶಾಸಕರ ಮುಂದಿರಿಸಿ ಅವರಿಂದ ಭರವಸೆ ಪಡೆದರು.
ಇದೇ ಸಂದರ್ಭದಲ್ಲಿ ಅನೇಕ ಮುಸ್ಲಿಂ ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು.
Related Posts
Add A Comment