ಸಿಂದಗಿ: ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ; ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ರಾಜಿನಾಮೆ ನೀಡಿ ನಮ್ಮೊಂದಿಗೆ ಕೈಜೋಡಿಸಿದ್ದಾರೆಂದ ಮೇಲೆ ಕಾಂಗ್ರೆಸ್ ಗತಿ ಎಲ್ಲಿಗೆ ಬಂತು ನೋಡಿ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ವ್ಯಂಗ್ಯವಾಡಿದರು.
ಪಟ್ಟಣದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಜಿ.ಪಂ ಮಾಜಿ ಸದಸ್ಯರ ಪ್ರತಿನಿಧಿ ಈರಗಂಟೆಪ್ಪ ಮಾಗಣಗೇರಿ, ತಾ.ಪಂ ಸದಸ್ಯ ಅಕ್ಬರ್ ಮುಲ್ಲಾ, ಜೆಡಿಎಸ್ ಹಿರಿಯ ಮುಖಂಡ ಸಲೀಂ ಜುಮನಾಳ ಸೇರಿದಂತೆ ಹಲವು ಗ್ರಾಮಗಳ ಗ್ರಾ.ಪಂ ಸದಸ್ಯರು ಮತ್ತು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು.
ಕ್ಷೇತ್ರದಲ್ಲಿ ದಿನೇ ದಿನೇ ಬದಲಾವಣೆ ಕಾವು ಏರುತ್ತಿದ್ದು, ಬಿಜೆಪಿಯ ಬಲ ಹೆಚ್ಚುತ್ತಿದೆ. ಕಾಂಗ್ರೆಸ್‌ಗೆ ಯಾರೂ ಮನಪೂರ್ವಕ ಕೈ ಜೋಡಿಸದಿದ್ದರೂ ಸಹ ಅವರಿಗೆ ಬಲವಂತದಿAದ ಶಾಲು ಹೊದಿಸಿ ಅವರ ಇಡೀ ಸಮಾಜವೇ ಪಕ್ಷ ಸೇರ್ಪಡೆಯಾಗಿದೆ ಎಂದು ಸುದ್ದಿ ಹಬ್ಬಿಸಿ ಪ್ರಚಾರ ಪಡೆಯುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಅವರು, ಡಬಲ್ ಇಂಜಿನ್ ಸರ್ಕಾರದ ಮತ್ತು ಶಾಸಕ ಭೂಸನೂರ ಅವರ ಸಾಧನೆಗಳನ್ನು ವಿವರಿಸಿದ್ದಲ್ಲದೇ, ಜನಸಾಮಾನ್ಯರಿಗೆ ಸ್ಪಂದಿಸುವ ಸರಳ ಸಜ್ಜನಿಕೆಯ ಶಾಸಕ ಭೂಸನೂರ ಅವರನ್ನು ದಾಖಲೆಯ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪಕ್ಷ ಸೇರ್ಪಡೆಯಾದ ಮುಖಂಡ ಸಲೀಂ ಜುಮನಾಳ, ತಾ.ಪಂ. ಮಾಜಿ ಸದಸ್ಯ ಅಕ್ಬರ ಮುಲ್ಲಾ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯಂಕAಚಿ ಗ್ರಾ.ಪಂ ಸದಸ್ಯರಾದ ಶರಣು ತಳಕೆರೆ, ಕರೆಪ್ಪ ತಳಕೆರಿ, ಗ್ರಾ.ಪಂ ಮಾಜಿ ಸದಸ್ಯರಾದ ಕೆಂಚಪ್ಪ ಮಾಗಣಗೇರಿ, ಸಂಗಣ್ಣ ಮಾಗಣಗೇರಿ ಹಾಗೂ ಶಿರಸಗಿ ಹವಳಗಿ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
ವೇದಿಕೆ ಮೇಲೆ ಜಿ.ಪಂ. ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ ಹೂವಿನಹಳ್ಳಿ, ಮುಖಂಡರಾದ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಶ್ರೀಮಂತ ನಾಗೂರ, ಶ್ರೀಶೈಲ ಮಾಗಣಗೇರಿ, ರವಿ ನಾಯ್ಕೋಡಿ, ಬಿ.ಆರ್. ಯಂಟಮಾನ, ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ರಾವೂರ, ಶಿವರಾಯ ಹಿಪ್ಪರಗಿ ಸೇರಿದಂತೆ ಹಲವರಿದ್ದರು.