ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡದಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಂಡು ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ೪೩೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತಾರು ವರ್ಷದಿಂದ ಗೌರವಧನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ೨೦೨೪-೨೫ನೇ ಸಾಲಿನಲ್ಲಿ ೧೦,೯೭೬ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಯುಜಿಸಿ ೨೦೧೮ ರ ಮಾರ್ಗಸೂಚಿ ಸೇವೆಯಿಂದ ಕೈಬಿಡದಂತೆ ಆಗ್ರಹಿಸಲಾಯಿತು.
೨೦೨೪-೨೫ನೇ ಸಾಲಿಗೆ ಸಂಬಂಧಿಸಿದಂತೆ ಅನ್ವಯ ೨೦೨೪-೨೫ನೇ ಹೊಸದಾಗಿ ಆಯ್ಕೆ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದ ೫೩೫೩ ಕ್ಕೂ ಹೆಚ್ಚು ಉಪನ್ಯಾಸಕರು ಸೇವೆಯಿಂದ ಹೊರಗುಳಿಯುವಂತಾಗಿದೆ. ಇದರಿಂದ ಇನ್ನುಳಿದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗಲಿದೆ. ಕಾರಣ ೧೦,೭೯೬ ಅತಿಥಿ ಉಪನ್ಯಾಸರನ್ನು ಕರ್ತವ್ಯ ನಿರ್ವಹಿಸುವಂತೆ ಕ್ರಮ ವಹಿಸಬೇಕು. ಈ ಉಪನ್ಯಾಸಕರನ್ನು ಕೈ ಬಿಡುವದರಿಂದ ದೇ ವೃತ್ತಿಯನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ. ಇನ್ನೊಂದೆಡೆ ಬಹುತೇಕರು ಯಾವುದೇ ನೌಕರರಿಗೆ ಅರ್ಜಿ ಹಾಕಲು ವಯೋಮಿತಿ ಕೂಡ ಮೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಬೇಕಿದೆ. ಇದಲ್ಲದೆ ಕೆಲ ಅಂಶದ ಆಧಾರದಲ್ಲಿ ನೋಡುವುದಾದರೆ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಕೈಬಿಡುವುದು ನಿಯಮಬಾಹಿರವಾಗಿದೆ. ಕಾರಣ ಯುಜಿಸಿ ೨೦೧೮ ರ ತಾತ್ಕಾಲಿಕ ಆಯ್ಕೆ ಪ್ರಕ್ರಿಯೆಯ ನಿಯಮಾವಳಿಯನ್ನು ಸರ್ಕಾರ ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಾರಾಯಣ ಮುದ್ದೇಬಿಹಾಳ, ರಾಜಶೇಖರ ಕುದರಿ, ಸಾಜೀದ ರಿಸಾಲದಾರ, ತನ್ವೀರ ಗೋಡೆಸವಾರ, ಕುಮಾರಸ್ವಾಮಿ, ನಾಗರೆಡ್ಡಿ, ರಾಜು ಚವ್ಹಾಣ,ರಾಜಕುಮಾರ ದಯಗೊಂಡ, ಕಡೇಮನಿ, ಇನ್ನಿತರರು ಉಪಸ್ಥಿತರಿದ್ದರು.

