ಉದಯರಶ್ಮಿ ದಿನಪತ್ರಿಕೆ
ಗೋಲಗೇರಿ: ವಚನಗಳಲ್ಲಿ ತಮ್ಮ ಸಾತ್ವಿಕ ಕೋಪತಾಪಗಳನ್ನು ವ್ಯಕ್ತಪಡಿಸುವ ಅಂಬಿಗರ ಚೌಡಯ್ಯ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಿದ್ದ ಶರಣರು ಎಂದು ಯುವ ಮುಖಂಡ ಮಡಿವಾಳ ನಾಯ್ಕೋಡಿ ಹೇಳಿದರು.
ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಸಂಚಾಲಕ ಶ್ರೀಶೈಲ ಜಾಲವಾದಿ, ರಮೇಶ ತಳವಾರ, ಸಲೀಮ ಮುಲ್ಲಾ ಶರಣರ ಜೀವನ ಕುರಿತು ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಗೋಲಗೇರಿ ಗ್ರಾಪಂ ಸದಸ್ಯರಾದ ಸೈಪನ್ ಕೋರವಾರ, ಮಲ್ಲಣ್ಣ ನಾಯ್ಕೋಡಿ ಬೆಂಗಳೂರು, ಭಾಗಣ್ಣ ಕೋಟೆಗೋಳ, ದವಲಸಾಬ ನಾಗಾವಿ, ಬಸವರಾಜ ತಳವಾರ, ಮೈಬೂಬ ಜೋಗುರ, ಅಬೂಬಕರ ಶಾಬಾದಿ, ಗೋಲ್ಲಾಳ ನಾಯ್ಕೋಡಿ, ಗೋಲ್ಲಾಳ ತಳವಾರ, ಮಹಾಂತೇಶ ನಾಯ್ಕೋಡಿ, ಮಲ್ಲಪ್ಪ ಪೂಜಾರಿ, ರವಿ ಯಡ್ರಾಮಿ, ರಾಜು ಯಂಕಂಚಿ, ವಿರೇಶ ನಾಯ್ಕೋಡಿ, ಪ್ರಕಾಶ ನಾಯ್ಕೋಡಿ, ರಾವುತ ನಾಯ್ಕೋಡಿ, ಬಂದಗಿಸಾಬ ಮೋಮಿನ್, ಮಾಂತು ನಾಯ್ಕೋಡಿ, ಲಾಲಸಾಬ ಶಾಬಾದಿ, ಖಾದಿರ ಶಾಬಾದಿ, ವಿರೇಶ ನಾಯ್ಕೋಡಿ, ಮಲ್ಲು ನಾಯ್ಕೋಡಿ, ಸುನೀಲ ಕೋಟೆಗೋಳ, ಮಡಿವಾಳಪ್ಪ ನಾಯ್ಕೋಡಿ ಸೇರಿದಂತೆ ಗೋಲಗೇರಿಯ ಸರ್ವಧರ್ಮದ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.

