ಧುಮಕನಾಳದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನೂತನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕಾಯಕ ನಿಷ್ಠೆಯ, ನೇರ, ನಿಷ್ಠುರ, ಸಮಾಜದಲ್ಲಿನ ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ವೇದಮೂರ್ತಿ ಸಂಗಯ್ಯ ಮಠ ಹೇಳಿದರು.
ಸಮೀಪದ ಧುಮಕನಾಳ ಗ್ರಾಮದಲ್ಲಿ ನೂತನ ಮೂರ್ತಿ ಪ್ರತಿಷ್ಥಾಪನೆ ಹಾಗೂ ಅನಾವರಣ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ೧೨ ನೇ ಶತಮಾನದ ಮಹಾನ್ ಚೇತನ, ಖ್ಯಾತ ವಚನಕಾರರು ಸಮಾಜದಲ್ಲಿನ ಅನಿಷ್ಠ ಪದ್ದತಿಗಳನ್ನು ತಮ್ಮ ವಚನಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ. ಅಂತಹ ಮಹಾನ್ ಶರಣದ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ರಾಜಶೇಖರ ಝಳಕಿ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಅಂತಹ ಮಹಾನ್ ನಿಜಶರಣ ಅಂಬಿಗರ ಚೌಡಯ್ಯ ರವರ ಪುತ್ಥಳಿ ನಿರ್ಮಾಣ ಮಾಡಿದ್ದೀರಿ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ಅಂಬಿಗರ ಚೌಡಯ್ಯನವರು ೧೨ ನೇ ಶತಮಾನದ ಅನೇಕ ಶರಣರಂತೆ ಅಂಬಿಗರ ಚೌಡಯ್ಯನವರು ಪ್ರಮುಖ ವಚನಕಾರರಲ್ಲಿ ಒಬ್ಬರಾಗಿದ್ದಾರೆ. ಅತ್ಯಂತ ನಿಷ್ಠುರ, ದಾರ್ಶನಿಕ, ನೇರ ವ್ಯಕ್ತಿತ್ವ ತಮ್ಮ ಕಾಯಕ ಅಂಬಿಗ ವೃತಿಯೊಂದಿಗೆ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಹಲವಾರು ವಚನಗಳನ್ನು ಸೃಷ್ಟಿಸಿ ಸಮಾಜ ಸರಿದಾರಿಯಲ್ಲಿ ಮುನ್ನಡೆಯಲು ಪ್ರಮುಖರಾಗಿದ್ದಾರೆ. ಸಮಾಜದಲ್ಲಿನ ಮೂಡನಂಬಿಕಗಳನ್ನು ಹೋಗಲಾಡಿಸಲು ತಮ್ಮನ್ನು ತಾವು ತೊಡಗಿಸಿಕೊಂಡವರು ಅದು ಅಂಬಿಗರ ಚೌಡಯ್ಯನವರಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ನಂದರಗಿ ಗ್ರಾಮ ಪಂಚಾಯತ ಸದಸ್ಯ ಪ್ರಕಾಶಗೌಡ ಮಾತನಾಡಿ, ನಿಜ ಶರಣ ಅಂಬಿಗರ ಚೌಡಯ್ಯ ತತ್ವಸಿದ್ದಾಂತಗಳನ್ನು ಪಸರಿಸಲು ಗ್ರಾಮದ ಅಂಬಿಗ ಸಮಾಜದ ಮುಖಂಡರು ಇಂತಹ ಪುತ್ಥಳಿ ನಿರ್ಮಾಣ ಲಯಗೊಂಡಿರುವ ಕಾರ್ಯ ಮೆಚ್ಚುವಂಥದ್ದು ಇದರೊಂದಿಗೆ ಅವರ ತತ್ವ ಸಿದ್ದಾಂತಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವದರೊಂದಿಗೆ ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕೆ ಎಂ ಎಫ್ ನಿರ್ದೇಶಕ ಸಂತೋಷಗೌಡ ಪಾಟೀಲ ಮಾತನಾಡಿದರು.
ಸೋಮವಾರದಂದು ಹತ್ತಳ್ಳಿಯ ಶ್ರೀ ಷ ಬ್ರ ಗುರುಪಾದೇಶ್ವರ ಶಿವಾಚಾರ್ಯರ ಅಮೃತ ಹಸ್ತದಿಂದ ನಿಜ ಶರಣ ಅಂಬಿಗರ ಚೌಡಯ್ಯ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು ಅಂದು ರಾತ್ರಿ ತದ್ದೇವಾಡಿಯ ಚಂದ್ರಶೇಖರ ಶಿವಾಚಾರ್ಯರಿಂದ ವಿಶೇಷ ಪ್ರವಚನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಬಸಯ್ಯ ಮಠ, ಗ್ರಾಮದ ಮುಖಂಡರಾದ ಶೇಕುಗೌಡ ಪಾಟೀಲ, ಸಂತೋಷಗೌಡ ಪಾಟೀಲ, ಚಂದ್ರಶೇಖರ ಪೂಜಾರಿ, ಸಾಹೇಬಗೌಡ ಬಿರಾದಾರ, ಮಾಜಿ ಸೈನಿಕರಾದ ವಿಜಯಕುಮಾರ ಪಾಟೀಲ, ಕಾಶಿನಾಥ ಬಿರಾದಾರ, ಬರಡೋಲ ಮಾಜಿ ಗ್ರಾ.ಪಂ ಸದಸ್ಯರು ತುಕಾರಾಮ ಶಿಂಧೆ, ನಂದರಗಿ ಗ್ರಾಮ ಪಂಚಾಯತಿ ಸದಸ್ಯರು ಅಪ್ಪುಗೌಡ ಪಾಟೀಲ, ಶ್ರೀಶೈಲ ಬಿರಾದಾರ, ಪ್ರಭುಲಿಂಗ ಪ್ರಧಾನಿ,ಅಬುಸಾಬ ದೊಡಮನಿ, ಚಂದ್ರಕಾಂತ ನಂದಗೊಂಡ, ಚಂದು ಡೆಂಗಿ,ಪಾಂಡುರಂಗ ನಂದಗೊಂಡ, ಸತೀಶ ದೇವಕತೆ, ಚಡಚಣ ತಾ ಪಂಚಮಸಾಲಿ ಅಧ್ಯಕ್ಷ ಭೀಮನಗೌಡ ಪಾಟೀಲ, ಬಸವರಾಜ ಕೋಳಿ, ನೀಲಕಂಠ ಪಾಟೀಲ, ರಾಜಕುಮಾರ ಜಾಧವ, ಪ್ರಭಾಕರ ಪಾಟೀಲ, ಮಲಿಕ್ ಜಮಾದಾರ, ರಮೇಶ ಕೋಳಿ, ಧರೆಪ್ಪ ಕೋಳಿ, ಘೇನು ಕೋಳಿ, ರಾಜಕುಮಾರ ಹೋಳ್ಕರ, ದಿಲಿಪ ಪಾಟೀಲ, ಲಾಲಸಾಬ ಜಮಾದಾರ, ಅಣ್ಣಾರಾಯಗೌಡ ಪಾಟೀಲ, ತುಳಜಪ್ಪ ಕೋಳಿ, ಭಾಗಣ್ಣ ಕೋಳಿ, ಸಮಸ್ತ ತಳವಾರ ಸಮಾಜದ ಮುಖಂಡರು, ಸುತ್ತಮುತ್ತಲಿನ ಗ್ರಾಮದ ಜನರು ಸೇರಿದಂತೆ ಉಪಸ್ಥಿತರಿದ್ದರು. ಸುರೇಶ ಬಂಡಿ ಕಾರ್ಯಕ್ರಮ ನಿರೂಪಿಸಿದರು.
” ೧೨ ನೇ ಶತಮಾನದ ಶ್ರೇಷ್ಠ ನಿಜ ಶರಣ ಅಂಬಿಗರ ಚೌಡಯ್ಯನವರು ಇಂದಿನ ಸಮಾಜಕ್ಕೆ ಎಂದೆಂದಿಗೂ ಆದರ್ಶಪ್ರಾಯರು.ಅವರ ವಿಚಾರಧಾರೆಗಳನ್ನು ನಮ್ಮಲ್ಲಿ ಜೀವಂತವಾಗಿಸಬೇಕಾಗಿದೆ ಆದ್ದರಿಂದ ಇಂದು ಅವರ ಮೂರ್ತಿ ಪ್ರತಿಷ್ಠಾಪನೆಯಿಂದ ಬಹು ದಿನಗಳ ಕನಸು ಇಂದು ಈಡೇರಿದಂತಾಗಿದೆ.”
– ದಯಾನಂದ ಕೋಳಿ
ತಳವಾರ ಸಮಾಜದ ಮುಖಂಡ.

