ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜ೧೮ ಶನಿವಾರದಂದು ಹಾಲುಮತ ಸಮುದಾಯದ ಕುಂದು ಕೊರತೆ ಆಲಿಸಲು ಹಾಗೂ ವೈಯಕ್ತಿಕ ವಿಚಾರ ತಮ್ಮೊಂದಿಗೆ ಹಂಚಿಕೂಳ್ಳಲು ಸಾಯಂಕಾಲ ೫ಘಂಟೆಗೆ ಪಟ್ಟಣದ ಚನ್ನಮ್ಮ ಸರ್ಕಲ್ ಹತ್ತಿರ ರವಿ ನಾಯ್ಕೋಡಿ ಅವರ ಮನೆ ಹತ್ತಿರ ನಿರ್ಮಿಸಲಾದ ಬಹಿರಂಗ ವೇದಿಕೆಗೆ ಆಗಮಿಸಲಿದ್ದಾರೆ.
ಸಿಂದಗಿ ಹಾಗೂ ಅಲಮೇಲ ತಾಲೂಕಿನ ಹಾಲುಮತ ಸಮಾಜದ ಹಿರಿಯರು, ಯುವಕರು ಸಂಘಟನಾ ಪದಾಧಿಕಾರಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕುರುಬ ಸಮಾಜದ ತಾಲೂಕ ಅಧ್ಯಕ್ಷ ನಿಂಗಣ್ಣ ಬಿರಾದಾರ, ಮಲ್ಲು ಸವಳಸಂಗ, ರವಿಕಾಂತ್ ನಾಯ್ಕೋಡಿ, ನಾಗಪ್ಪ ಶಿವೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

