ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಾರಣಾಸಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಟೆನಿಸ್ ಪೆಡರೆಶನ್ ಕಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ವಿಜೇತರಾದ ಹೆಮ್ಮೆ ನನಗಿದೆ ಎಂದು ಪ್ರಶಾಂತ ರಾಠೋಡ ಹೇಳಿದರು.
ತಾಲ್ಲೂಕಿನ ಹಿಟ್ನಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಾಧನೆಗೆ ಸತತ ಪ್ರಯತ್ನ ಅತೀ ಅಗತ್ಯ ಎಂದು ತಮ್ಮ ಸಾಧನೆಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ಮತ್ತೊಂದು ತಂಡವನ್ನು ಪ್ರತಿನಿಧಿಸಿ ವಿಜೇತರಾದ ಶಿವರಾಜ ರಾಠೋಡರನ್ನು ಸಹ ಸನ್ಮಾನಿಸಲಾಯಿತು.
ಅಧ್ಯಕ್ಷೆ ರತ್ನಾಬಾಯಿ ಮಾದರ, ಉಪಾಧ್ಯಕ್ಷ ಮಲ್ಲು ದೊಡಮನಿ, ಪಿಡಿಓ ವಿನೋದ ರಾಠೋಡ, ಸದಸ್ಯರುಗಳಾದ ಕಸ್ತೂರಿಬಾಯಿ ದೊಡಮನಿ, ಸಾಹೇಬಗೌಡ ಇಂಗಳಗಿ, ಲಾಳೇಸಾಹೇಬ ಚಟ್ಟರಕಿ, ಸೀತಾರಾಮ ರಾಠೋಡ, ಅನೀಲ ರಾಠೋಡ, ಗಡ್ಡೆಪ್ಪ ಹೊಸಮನಿ, ದಯಾನಂದ ನಾಯಿಕ, ಸಂಜೀವ ಹೊಸಮನಿ, ವೇಣು ರಾಠೋಡ, ಶರಣು ನಾಯ್ಕೋಡಿ, ಸಿಬ್ಬಂದಿ ಗೀತಾ ದೇಸಾಯಿ, ಗ್ರಂಥಾಲಯ ಮೇಲ್ವಿಚಾರಕ ರಮೇಶ ಕುಂಬಾರ ಇದ್ದರು.

