Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸುಸಂಸ್ಕೃತಿ

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ

ಜು.೧೩ರಿಂದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿ ಮಾಡಿದ ಪ್ರೊ.ಪಟ್ಟಣಶೆಟ್ಟರು
(ರಾಜ್ಯ ) ಜಿಲ್ಲೆ

ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿ ಮಾಡಿದ ಪ್ರೊ.ಪಟ್ಟಣಶೆಟ್ಟರು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮಿಗಳ ಬಣ್ಣನೆ

ಉದಯರಶ್ಮಿ ದಿನಪತ್ರಿಕೆ

ವರದಿ: ಗುಲಾಬಚಂದ ಜಾಧವ
ಅಥಣಿ: ಪರಿಪಕ್ವತೆಯ ಕಾಯಕ ತತ್ವದ ಪರಿಪಾಲಕರಾಗಿರುವ ಪ್ರೊ.ಶಿವಾನಂದ ಪಟ್ಟಣಶೆಟ್ಟರು ಶಿಕ್ಷಣ ರಂಗದಲ್ಲಿ ಅಭೂತಮಯ ಸಾಧನೆ ಗೈದಿದ್ದಾರೆ. ಅವರ ಶೈಕ್ಷಣಿಕ ಪ್ರೀತಿ,ಸಾಮಾಜಿಕ ಕಳಕಳಿ ಆದರ್ಶನೀಯವಾಗಿದೆ. ಇದನ್ನು ಗುರುತಿಸಿ ಅಥಣಿ ಮೋಟಗಿಮಠದವರು ಪಟ್ಟಣಶೆಟ್ಟರ ಅವರಿಗೆ ಸಮಾಜಸೇವಾ ಭೂಷಣ ಪ್ರಶಸ್ತಿ ಕೊಡಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಈಚೆಗೆ ಅಥಣಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಹಾಗೂ ಸಮಾಜೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ತೋಂಟದ ಡಾ. ಸಿದ್ದರಾಮ ಪೂಜ್ಯರು, ಕಾಯಕ ಜೀವ ಶಿವಾನಂದ ಪಟ್ಟಣಶೆಟ್ಟರು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಭದ್ರಬೂನಾದಿಯನ್ನು ಹಾಕಿ ಇಂದು ಉಚ್ಚಾಯ ಮಟ್ಟಕ್ಕೆ ತಂದಿದ್ದಾರೆ. ಹಗಲಿರುಳು ಕಾಯಕ ತಪೋಭವದ ತತ್ಪರತೆಯಲ್ಲಿ ಸವೆದು ತೋಂಟದಾರ್ಯ ಮಠ ಸೇರಿದಂತೆ ಸಂಸ್ಥೆಯಡಿಯಲ್ಲಿನ ಎಲ್ಲಾ ಶಾಲಾ,ಕಾಲೇಜುಗಳನ್ನು ಹೆಮ್ಮರವಾಗಿ ಅಭಿವೃದ್ಧಿಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ವಿಸ್ತಾರವಾಗಿ ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.ಆ ದಿಸೆಯಲ್ಲಿ ಅವರ ಶೈಕ್ಷಣಿಕ ಪ್ರೀತಿ,ಸಾಮಾಜಿಕ ಕಳಕಳಿ ಭಾವಪುಷ್ಪ ಅನನ್ಯವಾಗಿದೆ ಎಂದರು.
ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಅಧೀನದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು ಮೂವತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಪಟ್ಟಣಶೆಟ್ಟರ ಅವರ ನಿಷ್ಕಲ್ಮಶ ಶ್ರಮಭಾವದಿಂದ ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ಜ್ಞಾನ ಪ್ರಸರಣ ದಾಸೋಹ ನಡೆಯುತ್ತಿದೆ. ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿರಪೇಕ್ಷ ಭಾವದಿಂದ ಸರಳತೆ ಶೈಲಿಯ ಪ್ರಾಮಾಣಿಕತೆ ಜೀವನ ಸಾಗಿಸುತ್ತಾ ಸಮಾಜಕ್ಕೆ ಸದಾ ಒಳಿತು ಬಯಸಿ ಅಪೂರ್ವ ಸೇವಾಧಾರೆ ಎರೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆಯೊಂದಿಗೆ ಅದ್ಭುತ ಯಶಸ್ಸು, ಕ್ರಾಂತಿ ಮಾಡಿರುವ ಇಂತಹ ವ್ಯಕ್ತಿಗಳನ್ನು ಶ್ರೀ ಮೋಟಗಿಮಠದವರು ಇಲ್ಲಿಗೆ ಬರ ಮಾಡಿಕೊಂಡು 2025 ರ ಸಮಾಜಸೇವಾ ಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡಿರುವುದು ಸ್ತುತ್ಯಾರ್ಹವಾಗಿದೆ ಎಂದರು.
ಇವರೊಂದಿಗೆ ಸನ್ಮಾನವನ್ನು ಸ್ವೀಕರಿಸಿದ ಜಮಖಂಡಿ ಶಾಸಕರಾದ ಹಾಗೂ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸ್ಥಾಪಕರಾದ ಶ್ರೀ ಜಗದೀಶ್ ಗುಡಗುಂಟಿ ಹಾಗೂ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಡಾ.ಅಜಿತ್ ಪ್ರಸಾದ್, ಮೈಸೂರಿನ ಡಾ.ಚಂದ್ರಶೇಖರಯ್ಯ,ಬೆಂಗಳೂರಿನ ಕೆ.ವಿ.ನಾಗರಾಜಮೂತಿ೯, ಆನಂದ ತಾಳಿಕೋಟ ಇವರಿಗೂ ಸಹ ಸಮಾಜ ಸೇವಾ ಭೂಷಣ ಪ್ರಶಸ್ತಿ ಹಾಗೂ ಬಸವ ಸಂಸ್ಕೃತಿ ಪ್ರಸಾರಕ್ಕಾಗಿ ಸೇವಾಭಾವ ಮಿಡಿದಿರುವ ಅಂತರರಾಷ್ಟ್ರೀಯ ಬಸವ ಪ್ರತಿಷ್ಠಾನ ಅಧ್ಯಕ್ಷ ಲಂಡನ್‌ ಮಹಾದೇವಯ್ಯ ಅವರಿಗೆ 2025 ನೇ ಸಾಲಿನ ರಾಜ್ಯ ಮಟ್ಟದ ಬಸವಭೂಷಣ ಪ್ರಶಸ್ತಿ ಪ್ರಧಾನ ಮಾಡಿರುವುದು ಅಭಿನಂದನೀಯ ಎಂದು ತೋಂಟದ ಡಾ. ಸಿದ್ದರಾಮ ಶ್ರೀಗಳು ನುಡಿದರು.
ಬಸವಣ್ಣನವರ ಕಾಯಕ ಪ್ರೇಮದೊಂದಿಗೆ, ದಾಸೋಹ, ಜ್ಞಾನ ಪ್ರಸಾರದಂಥ ಮಾನನೀಯ ಮೌಲ್ಯಯುತ ಪರಂಪರೆಯನ್ನು ಅಥಣಿಯ ಮೋಟಗಿಮಠದವರು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಮಠಾಧೀಶರಿಗೆ ಪ್ರೇರಣೆಯಾಗಿದೆ. ಸಂಪ್ರೇಮ, ಸಮಾನತೆ, ವಿಶ್ವಾಸ, ಸಾಮರಸ್ಯ, ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದ ವಿಶ್ವದ 216 ಮಹಾತ್ಮರ ಚರಿತಾಮೃತವನ್ನು ಒಂದೇ ಗ್ರಂಥದ ಮೂಖೇನ ನಾಡಿಗೆ ನೀಡಿರುವ ಪ್ರಭುಚನ್ನಬಸವ ಸ್ವಾಮೀಜಿಯವರ ಕಾರ್ಯ ನಿಜಕ್ಕೂ ಅವಣೀ೯ಯವಾಗಿದೆ ಎಂದು ಸಿದ್ದರಾಮ ಶ್ರೀ ಶ್ಲಾಘಿಸಿದರು.
ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿದ ಸಮಾರಂಭವನ್ನು ಸವೋ೯ಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಉದ್ಘಾಟಿಸಿ, ಬಸವ ಪರಂಪರೆಯ ವೈವಿಧ್ಯತೆ ಪ್ರತಿಪಾದಿಸಿದರು. ಸಾಮರಸ್ಯದ ಲೀಲೆ, ಸಮಾನತೆಯ ತೋರಣ, ಐಕ್ಯತೆ ಮೊನಚು, ಭಾತೃತ್ವತೆ ಸಂದೇಶಗಳ ಮೇಲೆ ಬೆಳಕು ಚೆಲ್ಲಿದರು.
ಮುಖ್ಯ ಅತಿಥಿಗಳಾಗಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ್, ಅಂತರರಾಷ್ಟ್ರೀಯ ಬಸವ ಪ್ರತಿಷ್ಠಾನ ಲಂಡನ್ ಇದರ ಅಧ್ಯಕ್ಷರಾದ ಎಸ್. ಮಹದೇವಯ್ಯನವರು, ಲೋಕಸಭಾ ಸದಸ್ಯರಾದ ಕುಮಾರಿ ಪ್ರಿಯಾಂಕ ಸತೀಶ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮೊದಲಾದವರು ಭಾಗವಹಿಸಿದರು.
ಮೋಟಗಿಮಠದ ಪ್ರಭುಚನ್ನಬಸವ ಶ್ರೀಗಳು, ಶಿವಮೊಗ್ಗ ಜಿಲ್ಲೆ ಆನಂದಪುರಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು, ಮಹಾಂತ ಶ್ರೀಗಳು, ಉತ್ತರಹಳ್ಳಿ ಆವಧೂತ ಪೀಠದ ವಿನಯ ಗುರೂಜಿ, ಹುಕ್ಕೇರಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಬೆಳಗಾವಿ ಡಾ.ಅಲ್ಲಮಪ್ರಭು ಶ್ರೀಗಳು,ನಾಗನೂರು ಮಠದ, ಶೇಗುಣಸಿ ಶ್ರೀಗಳು ಸಮ್ಮುಖ ವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸುಸಂಸ್ಕೃತಿ

ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ

ಜು.೧೩ರಿಂದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ

ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಪ್ಯಾಕೇಜ್ ಬಿಡುಗಡೆಗೊಳಿಸಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸುಸಂಸ್ಕೃತಿ
    In ವಿಶೇಷ ಲೇಖನ
  • ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿ ಬಂಧನಕ್ಕೆ ಜಿಲ್ಲಾಧಿಕಾರಿ ಆದೇಶ
    In (ರಾಜ್ಯ ) ಜಿಲ್ಲೆ
  • ಜು.೧೩ರಿಂದ ಸೋಮದೇವರಹಟ್ಟಿ ದುರ್ಗಾದೇವಿ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಪ್ರತಿ ಎಕರೆಗೆ ೨೫ ಸಾವಿರ ರೂ. ಪರಿಹಾರ ಪ್ಯಾಕೇಜ್ ಬಿಡುಗಡೆಗೊಳಿಸಿ
    In (ರಾಜ್ಯ ) ಜಿಲ್ಲೆ
  • ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತಸಂಘ ಮನವಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆ ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಸೈಕ್ಲಿಂಗ್ ಗ್ರೂಪ್ ನಿಂದ ಪಂಡರಪುರಕ್ಕೆ ಸೈಕಲ್ ಯಾತ್ರೆ ಇಂದು
    In (ರಾಜ್ಯ ) ಜಿಲ್ಲೆ
  • ರೈತರ ಸಾಲ ಸಂಪೂರ್ಣ ಮನ್ನಾ ಮಾಡಲು ಹಸಿರು ಸೇನೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಕನ್ನಡಪ್ರಭ ಸಂಪಾದಕ ಜೋಗಿಗೆ ಕೆಯುಡಬ್ಲ್ಯೂಜೆ ಅಭಿನಂದನೆ
    In (ರಾಜ್ಯ ) ಜಿಲ್ಲೆ
  • ನಾಗಠಾಣ ಉಪಕಾಲುವೆಗೆ ನೀರು ಹರಿಸಲು ರೈತರ ಆಗ್ರಹ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.