ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಂದಗಿಯ ವಿಶ್ವಪ್ರಕಾಶ ನಟನೆಯ ಮಾಧವಾನಂದ ಶೇಗುಣಸಿ ನಿರ್ಮಾಣದ “ಸಂಗಮೇಶ್ವರ ಮಹಾರಾಜರು” ಚಿತ್ರದ ಹಾಡು ಭಾಗವಹಿಸಿತ್ತು. ನಂತರ ಸಂಗಮೇಶ್ವರ ಮಹಾರಾಜರ ಭಕ್ತಿ ಪ್ರದಾನ ಚಿತ್ರಕ್ಕೆ ಅತ್ಯುತ್ತಮ ಭಕ್ತಿಗೀತೆ ಎಂದು ಆಯ್ಕೆಯಾಗಿದೆ.
ಚಲನಚಿತ್ರೋತ್ಸವದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳು, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ದೇಶಕ ಕಿನ್ನಾಳ ರಾಜ, ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ, ಮಾಸ್ಟರ್ ಆನಂದ, ಗಾಯಕ ಜಸ್ಕರಣ ಸಿಂಗ್, ಡಾ.ಆರ್ ಎಸ್ ರಾಜು, ಚಿತ್ರತಂಡ ಛಾಯಾಗ್ರಾಹಕ ರವಿ ಕುಂಟೋಜಿ, ಸಂಕಲನಕಾರ ಬಸವರಾಜ ಬಡಿಗೇರ, ಸಚಿನ ಶೆಟ್ಟಿ, ಸಿನಿಮಾ ಪ್ರಚಾರಕರ್ತ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ, ಸೇರಿದಂತೆ ಇನ್ನಿತರರು ಇದ್ದರು. ಮಂಗಳೂರಿನ ದೀಕ್ಷಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

