ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ತುರ್ತುಚಿಕಿತ್ಸೆ ವಿಭಾಗಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಜ.೧೫ರಂದು ಅನೀರಿಕ್ಷಿತವಾಗಿ ಭೇಟಿ ನೀಡಿದರು.
ಭೇಟಿ ನೀಡಿ ಅಲ್ಲಿರುವ ರೋಗಿಗಳ ಆರೈಕೆಯ ಕುರಿತು ವೈದ್ಯರು ಮತ್ತು ಸಿಬ್ಬಂದಿಯವರಿಂದ ಮಾಹಿತಿಯನ್ನು ಪಡೆದರು. ರೋಗಿಗಳಿಗೆ ಮತ್ತು ರೋಗಿಯ ಸಂಬಂದಿಕರಿಗೆ ನೀಡುತ್ತಿರುವ ಸೌಲಭ್ಯದ ಬಗ್ಗೆ ವಿಚಾರಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಚತೆ, ವಿದ್ಯುತ್ತ ವ್ಯವಸ್ಥೆ, ನೀರು ಮತ್ತು ಇನ್ನಿತರ ಸೌಲಭ್ಯವನ್ನು ಸಮರ್ಪಕಾಗಿ ನೀಡಲು ವೈದ್ಯರಿಗೆ ಸೂಚಿಸಿದರು.
ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲು ತಿಳಿಸಿದರು. ಈ ಸಮಯದಲ್ಲಿ ಕಾರ್ಯನಿರತ ವೈದ್ಯಾಧಿಕಾರಿಯಾದ ಡಾ|| ತಿಮ್ಮಾಪುರ ಗಲಗಲಿ, ರಾತ್ರಿ ಪಾಳೆಯ ಸೂಪರ್ ವೈಸರಾದ ಶ್ರೀಮತಿ ರೇಖಾ ಇಂಗಳೇಶ್ವರ ಹಾಗೂ ಇತರರು ಉಪಸ್ಥಿತರಿದ್ದರು.

