ಉದಯರಶ್ಮಿ ದಿನಪತ್ರಿಕೆ
ಧಾರವಾಡ: ಮಕ್ಕಳು ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಸದಾ ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ನಿರಂತರ ಶ್ರಮವಹಿಸಬೇಕು. ಪ್ರತಿಭೆ ಪ್ರಯತ್ನಶೀಲರ ಸ್ವತ್ತು. ಇಂದಿನ ಮಕ್ಕಳೇ ಈ ದೇಶದ ಭರವಸೆಯ ಬೆಳಕುಗಳು. ಹಾಗಾಗಿ ಈ ನಾಡಿನ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಗುರುತರ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಬಾಲವಿಕಾಸ ಅಕಾಡೆಮಿಯು ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗಾಗಿ ದೇಶದ ಮೊದಲ ಪ್ರಧಾನಿ ಶ್ರೀ ಜವಾಹರಲಾಲ ನೆಹರುರವರ ಜೀವನ ಸಾಧನೆ ಕುರಿತಾದ ರಾಜ್ಯಮಟ್ಟದ ಪ್ರಬಂಧ/ಭಾಷಣ ಸ್ಪರ್ಧೆಯನ್ನು ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಏರ್ಪಡಿಸಿ, ಪ್ರತಿ ಜಿಲ್ಲೆಯಿಂದ ವಿಜೇತರಾಗಿದ್ದ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಅಂತಿಮ ಸುತ್ತಿನ ರಾಜ್ಯಮಟ್ಟದ ಸ್ಪರ್ಧೆಯನ್ನು ಅಕಾಡೆಮಿಯ ಸಭಾವನದಲ್ಲಿ ಆಯೋಜಿಸಿ ಆಯ್ಕೆಗೊಂಡ ಮಕ್ಕಳಿಗೆ ನೀಡಲಾದ ಪ್ರಶಸ್ತಿಗಳನ್ನು ವಿತರಿಸಿ, ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಭಾಗವಹಿಸಿದ ಅಕಾಡೆಮಿ ಯೋಜನಾಧಿಕಾರಿಗಳಾದ ಭಾರತಿ ಶೆಟ್ಟರ ರವರು ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ, ದೇಶದ ಮೊದಲ ಪ್ರಧಾನಿ ನೆಹರುರವರು ಹೇಳಿದಂತೆ “ದೇಶದ ಉಜ್ವಲ ಭವಿಷ್ಯ ಚಿಕ್ಕ ಮಕ್ಕಳ ಪುಟ್ಟ ಕಾಲುಗಳ ಮೇಲೆ ಮುನ್ನುಗ್ಗುತ್ತದೆ. ಮಕ್ಕಳ ಮೇಲೆ ಪ್ರೀತಿ, ಕಾಳಜಿ ವಹಿಸಲಾರದ ಯಾವ ದೇಶವೂ ಪ್ರಗತಿ ಸಾಧಿಸದು” ಹಾಗೂ ದೇಶದ ಇಂದಿನ ಮಕ್ಕಳು ಇಂದಿನ ಪ್ರಜೆಗಳೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಧಾರವಾಡ ಜಿಲ್ಲೆಗೆ ಕೃಷಿಕ ಸಮಾಜದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲನಗೌಡ ಸೋಮನಗೌಡ ಪಾಟೀಲ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ ಮರಿತಮ್ಮನವರ, ವಿ.ಎಸ್ ರೇಷ್ಮಿ ಇವರು ಅತಿಥಿಗಳಾಗಿ ಆಗಮಿಸಿದ್ದರು ಹಾಗೂ ಎಲ್ಲ ಜಿಲ್ಲೆಗಳಿಂದ ಸ್ಪರ್ಧೆಗೆ ಆಗಮಿಸಿದ ಮಕ್ಕಳು, ಶಿಕ್ಷಕರು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತೋಷಪಟ್ಟರು.
ಇದೇ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷರ ಆಪ್ತಕಾರ್ಯದರ್ಶಿಗಳಾದ ದೀಪಾ ಜಾವೂರ, ಪುಷ್ಪಾ ಹಂಜಗಿ, ಸುವರ್ಣಲತಾ ಮಠದ, ಪದ್ಮಶ್ರೀ ಮೇಟಿ, ಅರ್ಪಿತಾ, ಶಿವಕುಮಾರ, ಅಶೋಕ, ಸ್ಟ್ಯಾನ್ಲಿ, ರವಿಕಿರಣ ಹಾಜರಿದ್ದರು.
ಕಾರ್ಯಕ್ರಮವನ್ನು ಅಮೃತ ಸಾಣಿಕೊಪ್ಪ ಇವರು ನಿರೂಪಿಸಿ, ವಂದಿಸಿದರು.

ಬಹುಮಾನ ಪಡೆದ ವಿದ್ಯಾರ್ಥಿಗಳು
ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳು
ಭಾಷಣ ಸ್ಪರ್ಧೆ, ಪ್ರಾಥಮಿಕ ವಿಭಾಗ
ಬೆಂಗಳೂರು (ಉ) ಜಿಲ್ಲೆ, ತನುಷಾ
ಪ್ರಥಮ, ರೂ.25000/- ಬಹುಮಾನ
ಉ.ಕನ್ನಡ ಜಿಲ್ಲೆ, ಐಶ್ವರ್ಯು ಶೇಟ್
ದ್ವಿತೀಯ, ರೂ.12500/- ಬಹುಮಾನ
ಗದಗ ಜಿಲ್ಲೆ, ತನುಶ್ರೀ ಮರಾಠೆ
ತೃತೀಯ, ರೂ.3750/- ಬಹುಮಾನ
ಬಾಗಲಕೋಟ ಜಿಲ್ಲೆ, ಸೌಮ್ಯ ಹಿರೇಮಠ
ತೃತೀಯ, ರೂ.3750/- ಬಹುಮಾನ
ಭಾಷಣ ಸ್ಪರ್ಧೆ, ಪ್ರೌಢ ವಿಭಾಗ
ಉಡುಪಿ ಜಿಲ್ಲೆ, ಬ್ರೋವಿನ್ ನಗೇರ,
ಪ್ರಥಮ, ರೂ 25000/- ಬಹುಮಾನ
ಉತ್ತರ ಕನ್ನಡ ಜಿಲ್ಲೆ, ಸಿಂಚನಾ ಭಟ್ಟ್
ದ್ವಿತೀಯ, ರೂ.12500/-
ಚಾಮರಾಜನಗರ ಜಿಲ್ಲೆ, ಹರ್ಷೊಲ್ಲಾಸ
ತೃತೀಯ, ರೂ.7500/- ಬಹುಮಾನ
ಪ್ರಬಂಧ ಸ್ಪರ್ಧೆ, ಪ್ರಾಥಮಿಕ ವಿಭಾಗ
ವಿಜಯಪುರ ಜಿಲ್ಲೆ, ಪೂರ್ಣಿಮಾ ಕಂಬಾಗಿ,
ಪ್ರಥಮ, ರೂ.25000/- ಬಹುಮಾನ
ಬೆಂಗಳೂರು (ಉ)ಜಿಲ್ಲೆ, ನೇಹಾ
ದ್ವಿತೀಯ, ರೂ.12500/- ಬಹುಮಾನ
ತುಮಕೂರು ಜಿಲ್ಲೆ, ಕಾವ್ಯಶ್ರೀ
ತೃತೀಯ, ರೂ.7500/- ಬಹುಮಾನ
ಪ್ರೌಢ ವಿಭಾಗ
ಚಾಮರಾಜನಗರ ಜಿಲ್ಲೆ, ಸಮೀಕ್ಷಾ ಎಸ್
ಪ್ರಥಮ, ರೂ.25000/-
ಗದಗ ಜಿಲ್ಲೆ, ದಿವ್ಯಾ ಲಕ್ಕುಂಡಿ
ದ್ವಿತೀಯ, ರೂ.12500/-
ಹಾವೇರಿ ಜಿಲ್ಲೆ, ಕಾವ್ಯಾದಾಸ
ತೃತೀಯ, ರೂ.7500/-

