ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಹೊರಗುತ್ತಿಗೆ ಸಿಬ್ಬಂದಿಗೆ ಉತ್ತಮ ಸೇವೆ ಒದಗಿಸಲು ಸಹಕಾರ ಸಂಘಗಳ ಕಾಯಿದೆಯಡಿ ಈಗಾಗಲೇ ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜ ಬಡಿಗೇರ ಹೇಳಿದರು.
ಸಿಂಧಗಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಸಿಂದಗಿ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಿ ನೂತನ ಸಿಂದಗಿ ಘಟಕದ ಪದಾಧಿಕಾರಿಗಳ ಹೊರಗುತ್ತಿಗೆ ನೌಕರರ ಜಿಲ್ಲಾಧ್ಯಕ್ಷ ಸನ್ಮಾನಿಸಿ ಮಾತನಾಡಿದ ಅವರು, ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಸೊಸೈಟಿ ಮುಂದಿನ ದಿನಮಾನಗಳಲ್ಲಿ ನಮ್ಮ ಹೋರಾಟದ ಫಲದಿಂದ ಆರಂಭವಾಗಲಿದೆ ಎಂದರು.
ಈ ವೇಳೆ ನೂತನ ಅಧ್ಯಕ್ಷರಾಗಿ ಅಸ್ಲಾಂ (ಜುಬೇರ) ಗುಂದಗಿ, ಉಪಾಧ್ಯಕ್ಷರಾಗಿ ಪರಶುರಾಮ ಖೈನೂರ, ಕಾರ್ಯದರ್ಶಿಯಾಗಿ ಶರಣು ಪಾಟೀಲ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಅರ್ಜುನ್ ರಾಠೋಡ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಬೂದಿ, ಜಿಲ್ಲಾ ಖಜಾಂಚಿ ಯಾಸ್ಮಿನ್ ಬಡೇಗರ್, ಜಿಲ್ಲಾ ಸಮಿತಿಯ ಸದಸ್ಯರಾದ ಪುಂಡಲಿಕ್ ಹೊಸಮನಿ, ಇಂಡಿ ತಾಲೂಕಾಧ್ಯಕ್ಷ ಚಂದ್ರಾಮ ಮೇಡದಾರ, ಉಪಾಧ್ಯಕ್ಷ ಬಾಳಾಸಾಬ ವದರಿ, ಹೀರಗಪ್ಪ ದಿಡ್ಡಿಮನಿ, ಸಕ್ಕೂಬಾಯಿ ಹಾಲಿಮನಿ, ಶೋಭಾ ನಾವಿ, ಶಿಲ್ಪಾ ಬೂದಿ, ಕಸ್ತೂರಿ ಮಾದರ, ರಿಯಾಜ ಅಹ್ಮದ ಕೊರಬು, ಭಾಗ್ಯಶ್ರೀ ಸುಲ್ಫಿ, ಶಾಂತಾಬಾಯಿ ಕೊಚ್ಬಾಳ, ಆಫ್ರಿನ ಅತ್ತಾರ, ಮಲ್ಲಪ್ಪ ಗುಡಿಮನಿ, ರವಿ ನಾಟಿಕಾರ, ಪ್ರಕಾಶ ವಗ್ಗರ, ಬಸಲಿಂಗಪ್ಪ ಬಿರಾದಾರ, ರಾಮಣ್ಣ ರೋಗಿ, ಸಚಿನ ಸುಣಗಾರ, ಮರಪ್ಪ ಡಂಗಿ, ಲಕ್ಷ್ಮಿ ಖಜೂರಗಿ, ಮಲ್ಲಮ್ಮ ನಡುವಿನಕೇರಿ, ದಾವಲಸಾಬ ನಾಟೀಕಾರ, ಬಸವರಾಜ ಅಲಮೇಲ, ಇದ್ದರು.

